ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮಿಲನಾ ನಾಗರಾಜ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಾವ ಮಗು ಆದರೂ ಒಕೆ ಬಟ್ ಹೆಣ್ಣು ಮಗು ಆದರೆ ಸ್ವಲ್ಪ ಖುಷಿ ಹೆಚ್ಚು ಎಂದು ಹೇಳ್ತಿದ್ದ ಕಪಲ್ ಇದೀಗ ಹೆಣ್ಣು ಮಗು ಆಗಿದ್ದಕ್ಕೆ ಹೆಚ್ಚೇ ಖುಷಿಪಟ್ಟಿದ್ದಾರೆ.
ಈ ಖುಷಿ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ. ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿಯನ್ನು ಕೃಷ್ಣ ಹಂಚಿಕೊಂಡಿದ್ದಾರೆ.