ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ, ಉಪ್ಪು ಅರಿಶಿಣ ಹಾಕಿ
ನಂತರ ಹಾಗಲಕಾಯಿ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಬೆಲ್ಲ ಹಾಕಿ, ಕೆಲವೊಮ್ಮೆ ಬೆಲ್ಲದಲ್ಲಿಯೂ ಕಹಿ ಹೋಗೋದಿಲ್ಲ
ನಂತರ ಕ್ಯಾಪ್ಸಿಕಂ ಹಾಗೂ ಮೊಳಕೆ ಕಾಳುಗಳನ್ನು ಹಾಕಿ ಮಿಕ್ಸ್ ಮಾಡಿ
ಬೇಕಿದ್ದಲ್ಲಿ ಸೊಪ್ಪು ಕೂಡ ಹಾಕಿಕೊಳ್ಳಬಹುದು.
ನಂತರ ಸಾಂಬಾರ್ ಪುಡಿ, ಖಾರದಪುಡಿ ಹಾಕಿ
ಬೇಕಿದ್ದಲ್ಲಿ ಮ್ಯಾಗಿ ಮಸಾಲ ಹಾಕಿ
ನಂತರ ಕಾಯಿತುರಿ ಹಾಗೂ ಕೊತ್ತಂಬರಿ ಹಾಕಿದ್ರೆ ಪಲ್ಯ ರೆಡಿ