Wednesday, September 27, 2023

Latest Posts

ಚಂದಾಮಾಮನ ಅಂಗಳದಲ್ಲಿ ಮಗುವೊಂದು ಕುಣಿಯುತ್ತಿದೆ…ನೀವೂ ನೋಡಿದೀರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಚಂದ್ರನ ಮೇಲೆ ಆಮ್ಲಜನಕ ಧಾತು ಇದೆ ಎಂದು ಪತ್ತೆ ಮಾಡಿದೆ.

ಇದೀಗ ಇಸ್ರೋ ಮೇಲ್ಮೈ ನಲ್ಲಿ ರೋವರ್ ಸುರಕ್ಷಿತ ದಾರಿಗಾಗಿ ಶೋಧ ಮಾಡುತ್ತಾ ಅಡ್ಡಾಡುತ್ತಿರುವ ವಿಡೀಯೋವನ್ನು ಸಹ ಇಸ್ರೋ ಬಿಡುಗಡೆ ಮಾಡಿದ್ದು, ಮಗುವೊಂದು ಚಂದಾಮಾಮನ ಅಂಗಳದಲ್ಲಿ ತಮಾಷೆಯಾಗಿ ಕುಣಿಯುತ್ತಿದ್ದು, ಅದನ್ನು ತಾಯಿ ಅಕ್ಕರೆಯಿಂದ ಗಮನಿಸುತ್ತಿರುವಂತಿದೆ? ಅಲ್ಲವೇ?

ಈ ವಿಡಿಯೊವನ್ನು ಇಸ್ರೊ ಹಂಚಿಕೊಂಡಿದೆ.

ಬಾಹ್ಯಾಕಾಶ ಸಂಸ್ಥೆಯು 18 ಸೆಂ.ಮೀ ಎತ್ತರದ APXS ನ್ನು ತಿರುಗಿಸುವ ಸ್ವಯಂಚಾಲಿತ ಹಿಂಜ್ ಕಾರ್ಯವಿಧಾನವನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ​

26-ಕೆಜಿ, 6 ಚಕ್ರಗಳ, ಸೌರಶಕ್ತಿ ಚಾಲಿತ ಪ್ರಗ್ಯಾನ್ ರೋವರ್ ತನ್ನ ವೈಜ್ಞಾನಿಕ ಉಪಕರಣಗಳನ್ನು ಬಳಸಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮಣ್ಣು ಮತ್ತು ಬಂಡೆಗಳನ್ನು ಅಧ್ಯಯನ ಮಾಡಿ, ಇದು ಎತ್ತರದ ಪ್ರದೇಶಗಳಿಗೆ ಹೇಗೆ ವ್ಯತಿರಿಕ್ತವಾಗಿದೆ ಎಂಬ ಮಾಹಿತಿಯನ್ನು ದಾಖಲಿಸಲು ಸಜ್ಜುಗೊಂಡಿದೆ.

ಮುಂದಿನ ವಾರ ಅಂದರೆ ಚಂದ್ರನಲ್ಲಿ ರಾತ್ರಿಯಾಗುವ ಮುನ್ನ ಹುಡುಕಾಟವನ್ನು ಪೂರ್ತಿಗೊಳಿಸಲು ರೋವರ್‌ ಚಂದ್ರನ ಮೇಲ್ಮೈಯನ್ನು ಆವರಿಸಿರುವ ಅನೇಕ ಕುಳಿ, ಕಲ್ಲುಗಳನ್ನು ತಪ್ಪಿಸಲು ಜಾಗವನ್ನು ಹುಡುಕುತ್ತಿದೆ. ಅದಕ್ಕಾಗಿ ರೋವರ್‌ ಅನ್ನು ಸುರಕ್ಷಿತ ಮಾರ್ಗಕ್ಕೆ ತಿರುಗಿಸಲಾಗಿದೆ. ಅದರ ದೃಶ್ಯವು ಲ್ಯಾಂಡರ್‌ನಲ್ಲಿನ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!