ಹಸೆಮಣೆ ಏರಲಿದ್ದಾರೆ ನಟಿ ಪಾಯಲ್ ರೋಹಟ್ಗಿ-ಕುಸ್ತಿಪಟು ಸಂಗ್ರಾಮ್ ಸಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನಪ್ರಿಯ ಕಿರುತೆರೆ ನಟಿ ಪಾಯಲ್ ರೋಹಟ್ಗಿ ಮತ್ತು ಆಕೆಯ ಗೆಳೆಯ ಕುಸ್ತಿಪಟುವಾದ ಸಂಗ್ರಾಮ್ ಸಿಂಗ್ ಜುಲೈ 9ರಂದು ಹಸೆಮಣೆ ಏರಲಿದ್ದಾರೆ.
ಈ ಹಿಂದೆಯೇ ಇಬ್ಬರೂ ಮದುವೆಯಾಗಲು ಇಚ್ಚಿಸಿದ್ದರು. ಆದರೆ, ಕುಟುಂಬದ ಸದಸ್ಯರೊಬ್ಬರು ಸಾವನ್ನಪ್ಪಿದ ಕಾರಣ ಮದುವೆ ದಿನಾಂಕ ಮುಂದೂಡಿಕೆಯಾಗಿತ್ತು. ಇದೀಗ ಜುಲೈ 9ಕ್ಕೆ ಮದುವೆ ನಿಗದಿಯಾಗಿದೆ. ಅಹಮದಾಬಾದ್ ಅಥವಾ ಉದಯಪುರದಲ್ಲಿ ಮದುವೆ ಸಂಭ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.
ವಿವಾಹ ಸಂಭ್ರಮದಲ್ಲಿ ಕೇವಲ ಆಪ್ತೇಷ್ಟರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಸ್ತಿಪಟು ಸಂಗ್ರಾಮ್, ತನ್ನ ತಾಯಿ ಮತ್ತು ಸಹೋದರಿಯ ಸಹಾಯದಿಂದ ಇಬ್ಬರೂ ಅಂತಿಮವಾಗಿ ಮದುವೆಯ ದಿನಾಂಕವನ್ನು ನಿರ್ಧರಿಸಿದ್ದೇವೆ. ಪಾಯಲ್ ಮತ್ತು ನಾನು ಜುಲೈ 9ರಂದು ವಿವಾಹ ಬಂಧನಕ್ಕೆ ಒಳಗಾಗಲಿದ್ದೇವೆ. ಉದಯಪುರ ಅಥವಾ ಅಹಮದಾಬಾದ್​ನಲ್ಲಿ ವೆಡ್ಡಿಂಗ್​ ಪ್ಲಾನ್​ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!