ಡ್ರಗ್ಸ್​ ಪ್ರಕರಣದಲ್ಲಿ ಕ್ಲಿನ್ ಚಿಟ್: ಅಮೆರಿಕಾಗೆ ತೆರಳಲಿದ್ದಾರಾ ಆರ್ಯನ್ ಖಾನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಆರೋಪ ಮುಕ್ತಗೊಳಿಸಿದೆ.
ಈ ಹಿನ್ನೆಲೆಆರ್ಯನ್ ಖಾನ್ ಮುಂದಿನ ಯೋಜನೆಗಳ ಬಗ್ಗೆ ಕುತೂಹಲ ಮೂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಸ್ಟಾ ಶೀಘ್ರದಲ್ಲೇ ಅಮೇರಿಕಾ ವಿಮಾನ ಹತ್ತಲಿದ್ಧಾರೆ. ಮುಂದಿನ ಯೋಜನೆಗಳಿಗೆ ಪೂರಕವಾಗುವಂತೆ ಆರ್ಯನ್ ಅಲ್ಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ನ್ಯಾಯಾಲಯವು ಆರ್ಯನ್​ಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿರಲಿಲ್ಲ. ಅವರ ಪಾಸ್​ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದೀಗ ಅವರ ಪಾಸ್​ಪೋರ್ಟ್ ಮರಳಿ ಸಿಕ್ಕಿದ ತಕ್ಷಣ ಅವರು ಅಮೇರಿಕಾಗೆ ತೆರಳಲಿದ್ದಾರೆ .
ಆರ್ಯನ್ ಖಾನ್ ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಅವರು ನಟನೆಯ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸಿಲ್ಲ. ಬದಲಾಗಿ ನಿರ್ದೇಶನದ ಬಗ್ಗೆ ಅವರಿಗೆ ಒಲವಿದೆ. ವೆಬ್​ ಸರಣಿಯೊಂದಕ್ಕೆ ಅವರು ಆಕ್ಷನ್ ಕಟ್ ಹೇಳಲಿದ್ದಾರೆ ಸುದ್ದಿ ಹರಿದಾಡಿತ್ತು. ಇದೀಗ ತಮ್ಮ ನಿರ್ದೇಶನದ ತಯಾರಿಗೆ ಸಂಬಂಧಿಸಿದಂತೆ ಆರ್ಯನ್​ ಅಮೇರಿಕಾಗೆ ತೆರಳಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!