ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪೂಜಾ ಗಾಂಧಿಗೆ ಇಂದು 40ರ ಹುಟ್ಟು ಹಬ್ಬದ ಸಂಭ್ರಮ.
ಕನ್ನಡ ನಟಿಯರೇ ಕನ್ನಡ ಮಾತಾಡೋಕೆ ಬರೆಯೋಕೆ ನಾಚಿಕೆ ಪಡುವಂತಹ ಕಾಲದಲ್ಲಿ ನಟಿ ಪೂಜಾ ಗಾಂಧಿ ತಮ್ಮ ಕನ್ನಡ ಪ್ರೇಮದಿಂದಲೇ ಸಿನಿರಸಿಕರ ಮನಗೆದ್ದಿದ್ದಾರೆ.
ಇಂದು ಅವರು 40ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲಿದ್ದು, ನಟಿಗೆ ಇನ್ನೂ ಏಕೆ ಮದುವೆಯಾಗಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
ನಟಿ ತಮ್ಮ ಜನ್ಮದಿನದಂದು ಏನಾದ್ರೂ ಸಿಹಿ ಸುದ್ದಿ ಕೊಡ್ತಾರಾ? ಮದುವೆ ವಿಷಯದಲ್ಲಿ ಮೌನ ಮುರಿಯುತ್ತಾರಾ? ಎಂದು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.