ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಅಕ್ಷಯ್ ಕುಮಾರ್ ಸಿನಿಮಾಗಳು ಇತ್ತೀಚೆಗೆ ಹೆಚ್ಚೇನೂ ಕಮಾಯಿ ಮಾಡುತ್ತಿಲ್ಲ, ವರ್ಷಕ್ಕೆ ನಾಲ್ಕು ಸಿನಿಮಾ ಮಾಡಿದರೆ ನಾಲ್ಕಕ್ಕೆ ನಾಲ್ಕೂ ಸೂಪರ್ ಹಿಟ್ ಆಗುತ್ತಿದ್ದ ಕಾಲವೊಂದಿತ್ತು, ಆದರೆ ಈಗ ಅಕ್ಷಯ್ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಇದೆ.
ಇನ್ನು ಶಾರುಖ್ ಖಾನ್ ತಮ್ಮದೇ ಫ್ಯಾನ್ ಬೇಸ್ ಹೊಂದಿದ್ದಾರೆ, ಆದರೆ ಪಠಾಣ್, ಜವಾನ್ ಮೂಲಕ ಶಾರುಖ್ ಕಮ್‌ಬ್ಯಾಕ್ ಮಾಡಿದ್ದು, ಅಕ್ಷಯ್ ಫ್ಯಾನ್ಸ್ ಕೂಡ ಶಾರುಖ್ ಸಿನಿಮಾ ಕಡೆ ಒಲವು ತೋರಿದ್ದಾರೆ.
ಮಿಷನ್ ರಾಣಿಗಂಜ್ ಸಿನಿಮಾ ಓಪನಿಂಗ್‌ನಲ್ಲಿ ಹೆಚ್ಚೇನು ಕಮಾಯಿ ಮಾಡಿಲ್ಲ, ಆದರೆ ಜವಾನ್ ಸಾವಿರ ಕೋಟಿ ಕ್ಲಬ್ ಸೇರಿದೆ. ಈ ಬಗ್ಗೆ ಅಕ್ಕಿ ಮಾತನಾಡಿದ್ದಾರೆ.
ಶಾರುಖ್‌ರ ಜವಾನ್ ಸೂಪರ್ ಹಿಟ್ ಆಗಿದೆ, ಸಾವಿರ ಕೋಟಿ ಕ್ಲಬ್ ಸೇರಿದೆ. ಇದು ಬಾಲಿವುಡ್‌ಗೆ ಖುಷಿ ವಿಷಯ. ಇದೀಗ ಇನ್ನಷ್ಟು ಒಳ್ಳೆ ಸಿನಿಮಾ ಮಾಡೋದಕ್ಕೆ ಶಾರುಖ್ ಸಿನಿಮಾ ಮೋಟಿವೇಶನ್ ನೀಡಿದೆ ನಮ್ಮ ಇಂಡಸ್ಟ್ರಿಗೆ ಇದು ಒಳ್ಳೆಯದು ಎಂದು ಹೇಳಿದ್ದಾರೆ.