ಮೊದಲ ಬಾರಿಗೆ ಮಗಳ ಜೊತೆ ಭಾರತಕ್ಕೆ ಬಂದಿಳಿದ ನಟಿ ಪ್ರಿಯಾಂಕಾ ಚೋಪ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಹಾಲಿವುಡ್ ಗಾಯಕ-ನಟ ಪತಿ ನಿಕ್ ಜೋನಾಸ್ (Nick Jonas) ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕಾಣಿಸಿಕೊಂಡರು.

ತಮ್ಮ ಮಗಳೊಂದಿಗೆ ಪ್ರಿಯಾಂಕಾ ನಿಕ್‌ ದಂಪತಿಗಳು ವಿ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಚೋಪ್ರಾ ದೀರ್ಘ ಕಾಲದ ನಂತರ ಮೊದಲ ಬಾರಿಗೆ ತಮ್ಮ ಮಗಳು ಮಾಲ್ತಿ ಜೊತೆ ಭಾರತಕ್ಕೆ ಬಂದಿದ್ದಾರೆ.

ಪ್ರಿಯಾಂಕಾ ಗುಲಾಬಿ ಬಣ್ಣದ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರೆ , ನಿಕ್‌ ಕ್ಯಾಶುವಲ್‌ ಲುಕ್‌ನಲ್ಲಿದ್ದರು.14 ತಿಂಗಳ ಮಗಳು ಮಾಲ್ತಿ ಮೇರಿ ಇದೇ ಮೊದಲ ಬಾರಿಗೆ ಅಮ್ಮ-ಅಪ್ಪನೊಂದಿಗೆ ಮುಂಬೈ ಗೆ ಆಗಮಿಸಿದ್ದಾಳೆ. .

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರಿಗೆ ಮಗಳು ಮಾಲ್ತಿ ಜನವರಿ 2021 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಜನಿಸಿರುವುದು.

ಈಗ ಕೆಲವು ದಿನಗಳಿಂದ, ಪ್ರಿಯಾಂಕಾರ ಕಸಿನ್‌ ಪರಿಣಿತಿ ಚೋಪ್ರಾ ಮದುವೆಯ ವಿಷಯ್ಕಕಾಗಿ ಸುದ್ದಿ ಮಾಡುತ್ತಿದ್ದಾರೆ. ಸದ್ಯದಲ್ಲೇ ಶೀಘ್ರದಲ್ಲೇ ರೋಕಾ ಸಮಾರಂಭವನ್ನು ಆಯೋಜಿಸಬಹುದು ಮತ್ತು ಮದುವೆಯ ತಯಾರಿಯಲ್ಲಿದೆ ಎಂದು ವದಂತಿಗಳಿವೆ. ಈಗ ಪ್ರಿಯಾಂಕಾರ ಭಾರತದ ಭೇಟಿ ಈ ವದಂತಿಗಳಿಗೆ ಪುಷ್ಠಿ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!