Friday, June 9, 2023

Latest Posts

ರಾಹುಲ್ ಗಾಂಧಿ ಮತ್ತೊಂದು ಸಂಕಷ್ಟ: ಸಮನ್ಸ್ ನೀಡಿದ ಬಿಹಾರ ಕೋರ್ಟ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಿಜೆಪಿ ನಾಯಕ, ಬಿಹಾರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ರಾಹುಲ್ ಗಾಂಧಿ ವಿರುದ್ಧ ಬಿಹಾರ ಕೋರ್ಟ್​ನಲ್ಲಿ ಮತ್ತೊಂದು ಮಾನನಷ್ಟ ಮೊಕದ್ದಮೆ (Rahul Gandhi defamation case) ಹೂಡಿದ್ದಾರೆ. ಈ ಸಂಬಂಧ ಏಪ್ರಿಲ್​ 12ರಂದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಬಿಹಾರ ಕೋರ್ಟ್ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.

2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ್ದ ರಾಹುಲ್ ಗಾಂಧಿ ‘ಎಲ್ಲ ಕಳ್ಳರ ಸರ್​ನೇಮ್​ ಮೋದಿ ಎಂದೇ ಇರುತ್ತದೆ’ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ಗುಜರಾತ್​ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್​ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೇ ಮಾರ್ಚ್​ 23ರಂದು ತೀರ್ಪು ನೀಡಿದ ಸೂರತ್​ ಕೋರ್ಟ್​ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದೆ. ಹಾಗೇ, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸದ್ಯ 30 ದಿನಗಳ ಜಾಮೀನು ಆಧಾರದ ಮೇಲೆ ರಾಹುಲ್ ಗಾಂಧಿ ಹೊರಗೆ ಇದ್ದಾರೆ.

ಇದೀಗ ಮೋದಿ ಉಪನಾಮಕ್ಕೆ ಮಾಡಿದ ಅವಹೇಳನದ ವಿಚಾರವಾಗಿಯೇ ಸುಶೀಲ್ ಮೋದಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸುಶೀಲ್​ ಕುಮಾರ್ ಮೋದಿ, ಈ ಕೇಸ್​ನಲ್ಲಿ ಸಾಕ್ಷಿಗಳಾದ ಮಾಜಿ ಸಚಿವ ನಿತಿನ್​ ನವೀನ್​ (ಬಂಕಿಪುರ ಶಾಸಕ), ದಿಘಾ ಶಾಸಕ ಸಂಜೀವ್​ ಚೌರಾಸಿಯಾ, ಭಾರತೀಯ ಜನತಾ ಯುವ ಮೋರ್ಚಾ ಮುಖಂಡ ಮನೀಶ್ ಕುಮಾರ್​ ಅವರ ಹೇಳಿಕೆಗಳನ್ನು ಕೋರ್ಟ್​​ನಲ್ಲಿ ದಾಖಲು ಮಾಡಲಾಗಿದ್ದು, ರಾಹುಲ್ ಗಾಂಧಿಯವರು ಏಪ್ರಿಲ್​ 12ರಂದು ಕೋರ್ಟ್​ಗೆ ಭೇಟಿಕೊಟ್ಟು, ತಮ್ಮ ಹೇಳಿಕೆ ನೀಡಲಿದ್ದಾರೆ.
.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!