Sunday, June 4, 2023

Latest Posts

ನಟಿ ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ: ಮತ್ತೆ ಕೋರ್ಟ್ ಮೊರೆ ಹೋದ ಮಿಕಾ ಸಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ (Bollywood) ನಟಿ ರಾಖಿ ಸಾವಂತ್ (Rakhi Sawant) ಲಿಪ್ ಕಿಸ್ (Lip Kiss) ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ.

ಬಾಲಿವುಡ್ ಗಾಯಕ ಮಿಕಾ ಸಿಂಗ್ (Mika Singh) ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ರಾಖಿ ಸಾವಂತ್ ಅವರಿಗೆ ಬಲವಂತವಾಗಿ ಕಿಸ್ ಮಾಡಿದ್ದರು. 2006ರಲ್ಲಿ ನಡೆದ ಘಟನೆಯ ಬಗ್ಗೆ ರಾಖಿ ಕೋರ್ಟ್ ಮೊರೆ ಹೋಗಿದ್ದರು. ಸತತ 17 ವರ್ಷಗಳಿಂದ ಈ ಕೇಸ್ ನಡೆಯುತ್ತಿದೆ. ಇದೀಗ ಮಿಕಾ ಸಿಂಗ್ ಆ ಕೇಸ್ ಅನ್ನು ಕ್ಲೋಸ್ ಮಾಡಬೇಕು ಎಂದು ಬಾಂಬೆ ಹೈಕೋರ್ಟಿಗೆ ಮೊರೆ ಹೋಗಿದ್ದಾರೆ.

ಪ್ರಕರಣದ ನಂತರ ನಾವಿಬ್ಬರೂ ಮನಸ್ತಾಪವನ್ನು ಬಗೆಹರಿಸಿಕೊಂಡಿದ್ದೇವೆ. ರಾಖಿ ಸಾವಂತ್ ಕೂಡ ತಮ್ಮದೇ ಆದ ಉದ್ಯೋಗದಲ್ಲಿ ಬ್ಯುಸಿಯಾಗಿದ್ದಾರೆ. ಎಫ್.ಐ.ಆರ್ ಕ್ಲೋಸ್ ಮಾಡಲು ಅವರಿಗೆ ಯಾವುದೇ ಅಭ್ಯಂತರವಿಲ್ಲ. ಹಾಗಾಗಿ ಈ ಪ್ರಕರಣವನ್ನು ಅಂತ್ಯಗೊಳಿಸಬೇಕು ಎಂದು ಮಿಕಾ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!