Wednesday, June 7, 2023

Latest Posts

ನಾನು ಏನನ್ನೂ ಮರೆಯಲು ಬಯಸುವುದಿಲ್ಲ: ನಾಗ್ ಚೈತನ್ಯ ಜೊತೆಗಿನ ವಿಚ್ಛೇದನ ಬಗ್ಗೆ ಸಮಂತಾ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೌತ್ ನಟಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಂದರ್ಶನಗಳಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಡುತ್ತಿದ್ದಾರೆ.

ಪತಿ ನಾಗ ಚೈತನ್ಯ ಅವರಿಂದ ದೂರ ಆದ ಬಳಿಕ ಎದುರಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿದ್ದಾರೆ. ಸಮಂತಾ ತನ್ನ ಜೀವನದಲ್ಲಿ ಏನನ್ನು ಬದಲಾಯಿಸಿಕೊಳ್ಳಲು ಬಯಸುವುದಿಲ್ಲ ಅಲ್ಲದೇ ತೊಂದರೆಗೆ ಸಿಲುಕಿಕೊಳ್ಳಲು ಬಯಸಲ್ಲ ಎಂದು ಹೇಳಿದ್ದಾರೆ.

ಸಂದರ್ಶನದಲ್ಲಿ ಸಮಂತಾ ಅವರಿಗೆ ಈ ಹಿಂದಿನ ತಮ್ಮ ಅನುಭವಗಳನ್ನು ಮರೆಯಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿಗ ಸಮಂತಾ, ‘ನೀವು ನನ್ನನ್ನು ತೊಂದರೆಗೆ ಸಿಲುಕಿಸುತ್ತಿದ್ದೀರಿ. ನಾನು ಏನನ್ನೂ ಮರೆಯಲು ಬಯಸುವುದಿಲ್ಲ ಏಕೆಂದರೆ ಎಲ್ಲವೂ ನನಗೆ ಜೀವನದಲ್ಲಿ ಏನನ್ನಾದರೂ ಕಲಿಸಿದೆ, ಆದ್ದರಿಂದ ನಾನು ಮರೆಯಲು ಬಯಸುವುದಿಲ್ಲ, ಓ ದೇವರೇ, ನಾನು ಅದನ್ನು ಗಟ್ಟಿಯಾಗಿ ಹೇಳಬೇಕೇ?’ ಎಂದು ಹೇಳಿದರು.

‘ನಾನು ತೊಂದರೆಗೆ ಸಿಲುಕಲು ಬಯಸಲ್ಲ. ಹಾಗಾಗಿ ಈ ಪ್ರಶ್ನೆಗೆ ನಾನು ಉತ್ತರಿಸಲು ಹೋಗುವುದಿಲ್ಲ. ನಾನು ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಬಯಸುತ್ತೇನೆ ಏಕೆಂದರೆ ಎಲ್ಲವೂ ನನಗೆ ಕಲಿಸಿದ ಪಾಠವಾಗಿದೆ’ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!