ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಬುಧವಾರ (ಫೆಬ್ರವರಿ 21) ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ಬಾಲಿವುಡ್‌ನ ಶಿಲ್ಪಾ ಶೆಟ್ಟಿ, ಆಯುಷ್ಮಾನ್ ಖುರಾನ, ಅರ್ಜುನ್ ಕಪೂರ್, ಡೇವಿಡ್ ಧವನ್ ಮತ್ತಿತರರು ಹಾಜರಿದ್ದು ನೂತನ ವಧು-ವರರನ್ನು ಹಾರೈಸಿದರು.
ತಮ್ಮ ವಿವಾಹ ಸಂಭ್ರಮದ ಕೆಲವು ಚಿತ್ರಗಳನ್ನು ರಾಕುಲ್ ಹಂಚಿಕೊಂಡಿದ್ದಾರೆ.