ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ

ಮೇಷ
ಕೆಲವು ಪ್ರಮುಖ ಕಾರ್ಯ ಇಂದೇ ಪೂರೈಸಬೇಕಾದ ಒತ್ತಡ. ಆರ್ಥಿಕ ಬಿಕ್ಕಟ್ಟು ಕಾಡಬಹುದು. ಕಾಲು ನೋವು, ಸಂಧಿ ನೋವು ಉಂಟಾದೀತು.

ವೃಷಭ
ಉತ್ಸಾಹದ ದಿನ. ವಿಘ್ನಗಳು ನಿವಾರಣೆ. ಕೆಲಸದ ಒತ್ತಡ ಪರಿಹಾರ. ಕುಟುಂಬಸ್ಥರು ನಿಮ್ಮ ಮನಸ್ಸಿಗೆ ಪೂರಕವಾಗಿ ವರ್ತಿಸುವರು.

ಮಿಥುನ
ವೃತ್ತಿಯಲ್ಲಿ ಸಂಕಷ್ಟ. ನಿಮ್ಮಿಂದ ತಪ್ಪುಗಳು ಆಗಬಹುದು. ವಿವಾದದಲ್ಲಿ ಸಿಲುಕದಂತೆ ನೋಡಿಕೊಳ್ಳಲು ಸಹನೆ, ಮೌನ ಕಾಯ್ದುಕೊಳ್ಳಿ

ಕಟಕ
ಎಲ್ಲ ಕಾರ್ಯ ಇಂದು ಸುಗಮವಾಗಿ ಸಾಗುವವು. ಕುಟುಂಬ ಸದಸ್ಯರ ಜತೆ ಆತ್ಮೀಯ ಒಡನಾಟ. ಸಣ್ಣಪುಟ್ಟ ವಿಷಯ ನೆಮ್ಮದಿ ಕೆಡಿಸದಂತೆ ನೋಡಿ.

ಸಿಂಹ
ಕೆಲವು ಪ್ರತಿಕೂಲ ಪರಿಸ್ಥಿತಿಯನ್ನು ಸ್ಫೂರ್ತಿ ಯಿಂದ ನಿಭಾಯಿಸಿ. ಒತ್ತಡಕ್ಕೆ ಒಳಗಾಗಬೇಡಿ. ಸಂಜೆ ವೇಳೆಗೆ ನಿಮಗೆ ಅನುಕೂಲಕರ ಬೆಳವಣಿಗೆ.

ಕನ್ಯಾ
ನಿಮ್ಮ ಇಷ್ಟದ ವಸ್ತು ಅಥವಾ ವಾಹನ ಖರೀದಿಗೆ ಕಾಲ ಪ್ರಶಸ್ತವಾಗಿದೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಮಾನಸಿಕ ನೆಮ್ಮದಿ.

ತುಲಾ
ನಿಮ್ಮ ಕನಸು ನನಸಾಗಬೇಕಾದರೆ ಕಠಿಣ ಶ್ರಮವೂ ಅಗತ್ಯ. ಸಂಗಾತಿ ಜತೆಗಿನ ಭಿನ್ನಮತ ನಿವಾರಣೆ. ಕೆಲಸದ ಒತ್ತಡ ಕಡಿಮೆಯಾಗುವುದು.

ವೃಶ್ಚಿಕ
ಪ್ರಮುಖ ಕೆಲಸ ಇಂದು ಮುಗಿಯದು. ಕೆಲವರ ಅಸಹಕಾರ ಅದಕ್ಕೆ ಕಾರಣವಾಗುವುದು. ಎಂದಿಗಿಂತ ಹೆಚ್ಚು ಖರ್ಚಾಗಲಿದೆ. ಸಾಂಸಾರಿಕ ಅಶಾಂತಿ.

ಧನು
ನಿಮ್ಮ ಎಲ್ಲಾ ಸಹೋದ್ಯೋಗಿಗಳು ನಿಮ್ಮ ಒಳಿತನ್ನು ಬಯಸುವವರಲ್ಲ. ಅವರ ಕುರಿತು ಎಚ್ಚರವಿರಲಿ. ಕೆಲವರದು ತೋರಿಕೆ.

ಮಕರ
ನಿಮಗಿಂದು ಪೂರಕ ದಿನ. ನಿಮ್ಮ ಉದ್ದೇಶ ಈಡೇರುವುದು. ನೀವು ಬಯಸಿದ ಬೆಳವಣಿಗೆ ನಡೆಯುವುದು. ಕೌಟುಂಬಿಕ ಶಾಂತಿ ನೆಲೆಸುವುದು.

ಕುಂಭ
ಮಾನಸಿಕ ಒತ್ತಡ, ಗೊಂದಲಗಳು. ಪ್ರತಿಯೊಂದು ವ್ಯವಹಾರ ತಾಳ್ಮೆಯಿಂದ ನಿಭಾಯಿಸಿ. ಕುಟುಂಬಸ್ಥರ ಧೋರಣೆ ಬೇಸರ ತರುವುದು.

ಮೀನ
ನಿಮ್ಮ ನಿಷ್ಠಾವಂತ ಕಾರ್ಯಕ್ಕೆ ಉತ್ತಮ ಫಲ ದೊರಕುವುದು. ಸಂತೃಪ್ತಿ. ಕೆಲವರ ಒತ್ತಡಕ್ಕೆ ಒಳಗಾಗಿ ಶಾಪಿಂಗ್ ಹೋಗದಿರಿ. ಕಿಸೆಗೆ ಕತ್ತರಿ ಬಿದ್ದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!