Sunday, December 3, 2023

Latest Posts

ನಟಿ ರೋಜಾಗೆ ಅಶ್ಲೀಲ ವಿಡಿಯೋ ಬೆದರಿಕೆ: ಮಾಜಿ ಸಚಿವ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟಿ, ಆಂಧ್ರ ಪ್ರದೇಶ ಸಚಿವೆ ರೋಜಾ (Roja) ಅವರ ಅಶ್ಲೀಲ ವಿಡಿಯೋ (Porn video) ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿಯ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಅವರನ್ನು ಬಂಧಿಸಲಾಗಿದೆ.

ಹಲವು ದಿನಗಳಿಂದ ರೋಜಾ ಮತ್ತು ಬಂಡಾರು ಸತ್ಯನಾರಾಯಣ (Bandaru Satyanarayan) ಅವರಿಗೆ ಜಟಾಪಟಿ ನಡೆಯುತ್ತಿದೆ. ಹಾಗಾಗಿ ರೋಜಾ ಅವರ ಅಶ್ಲೀಲ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸೂಕ್ತ ಸಮಯದಲ್ಲಿ ರಿಲೀಸ್ ಮಾಡುತ್ತೇನೆ ಎಂದು ಬಂಡಾರು ಹೇಳಿದ್ದರು.

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಆಪ್ತರಾಗಿರುವ ಬಂಡಾರು ಅವರು, ನಾಯ್ಡು ಅವರ ಬಗ್ಗೆ ಅವಹೇಳನಕಾರಿಯಾಗಿ ರೋಜಾ ಮಾತನಾಡುವುದನ್ನು ನಿಲ್ಲಿಸದಿದ್ದರೆ ರೋಜಾ ಅವರ ಅಶ್ಲೀಲ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ಈ ಕುರಿತಂತೆ ರೋಜಾ ಅವರು ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಟೋಬರ್ 2 ರಂದು ಸೋಮವಾರ ಬೆಳಗ್ಗೆಯೇ ವಿಶಾಖಪಟ್ಟಣಂ ಜಿಲ್ಲೆಯ ಪರವಾಡದ ವೆನ್ನಿಲಪಾಲೆಂನಲ್ಲೇ ಬಂಡಾರು ಅವರನ್ನು ಬಂಧಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!