Monday, December 4, 2023

Latest Posts

ಕಲಬುರಗಿಯಲ್ಲಿ ಆರೆಸ್ಸೆಸ್ ಆಕರ್ಷಕ ಪಥಸಂಚಲನ

ಹೊಸದಿಗಂತ ವರದಿ ಕಲಬುರಗಿ: 

ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ನಗರದ ವತಿಯಿಂದ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್,ನ ಜವಳಿ ಕಾಂಪ್ಲೆಕ್ಸ್ ವರೆಗೂ ಗಣವೇಷಧಾರಿ ಸ್ವಯಂಸೇವಕರಿಂದ ಮಂಗಳವಾರ ಬೆಳಗ್ಗೆ ಆಕರ್ಷಕ ಪಥಸಂಚಲನ ಜರುಗಿತು.

ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಪ್ರಾರಂಭವಾದ ಪಥಸಂಚಲನವು ಮಿನಿ ವಿಧಾನಸೌಧ,ಕೆಇಬಿ ಕಚೇರಿ,ಲಾಹೋಟಿ ಪೆಟ್ರೋಲ್ ಬಂಕ್,ಆರ್ಚಿಡ್ ಮಾಲ್,ಎಸ್.ಎಂ.ಪಂಡಿತ ರಂಗಮಂದಿರ,ಇಂದಿರಾ ಸ್ಮಾರಕ್ ಭವನ್,ಜಗತ್ ವೃತ್ತದ ಮೂಲಕ ಜವಳಿ ಕಾಂಪ್ಲೆಕ್ಸ್ ವರೆಗೂ ಸಾಗಿ, ಸಂಪನ್ನಗೊಂಡಿತು.

ಗುಣಾತ್ಮಕ ಸಂಚಲನದಲ್ಲಿ 97 ಸ್ವಯಂಸೇವಕರು ಪೂರ್ಣ ಗಣವೇಶದಲ್ಲಿ ಭಾಗಿಯಾಗಿದ್ದು, ಮುಂಜಾಗೃತಾ ಕ್ರಮವಾಗಿ ಪೋಲಿಸ್ ಬಂದೋಬಸ್ತ್,ನಲ್ಲಿ ಪಥಸಂಚಲನ ಜರುಗಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕರಾದ ನರೇಂದ್ರ ಜೀ,ಹಿರಿಯರಾದ ಹಣಮಂತರಾವ್ ಪಾಟೀಲ್, ಅಶೋಕ್ ಪಾಟೀಲ್, ಶ್ರೀಧರ್ ನಾಡಿಗೇರ, ಪ್ರಾಂತ ಬೌದ್ಧಿಕ ಪ್ರಮುಖರಾದ ಕೃಷ್ಣ ಜೋಶಿ, ಗಿರೀಶ್ ಹೆಬ್ಬಾರ್, ವಿಭಾಗ ಪ್ರಚಾರಕರಾದ ವಿಜಯ್ ಮಹಾಂತೇಶ, ಕೃಷ್ಣ ರೆಡ್ಡಿ,ಕಿರಣ್ ಸುವರ್ಣಕಾರ್, ಸಾಗರ್ ಸತಾಳಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!