ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇದರಲ್ಲಿ ನಟಿ ರಾಗಿಣಿ ಹೆಸರು ಇದೆ ಎನ್ನಲಾಗಿದೆ. ರೇಣುಕಾಸ್ವಾಮಿ ನಟಿ ರಾಗಿಣಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಪ್ರೊಫೈಲ್ ಅನ್ನು ಏಜೆನ್ಸಿ ಹ್ಯಾಂಡಲ್ ಮಾಡುತ್ತದೆ. ಹೀಗಾಗಿ ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ. ಬಂದಿದ್ದರೂ ನಾನು ಅದನ್ನ ಓದುವುದಿಲ್ಲ ಎಂದಿದ್ದಾರೆ. ನನ್ನ ಗಮನಕ್ಕೆ ಬಂದಂತೆ ಯಾವುದೇ ಕೆಟ್ಟ ಸಂದೇಶ ಬಂದಿಲ್ಲ, ಬಂದಿದ್ದರೆ ನನಗೆ ಟೀಂ ಹೇಳಿರುತ್ತಿತ್ತು ಎಂದಿದ್ದಾರೆ.