ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮಾತನಾಡಿದ್ದಾರೆ.
ಅಪರಾಧಿ ಮುಸ್ಲಿಂ ಆಗಿದ್ದರೆ ಮಾತ್ರ ಮಹಿಳಾ ರಕ್ಷಣೆ ಬಗ್ಗೆ ಜನರು ಮಾತನಾಡುತ್ತಾರೆ ಎಂದು ಹೇಳಿ ಕೇಸ್ಗೆ ಧರ್ಮವನ್ನು ಲಿಂಕ್ ಮಾಡಿದ್ದಾರೆ.
ತಪ್ಪು ಮಾಡಿರುವ ವ್ಯಕ್ತಿ ಯಾವ ಧರ್ಮದವನು ಎನ್ನುವುದರ ಮೇಲೆ ಹೋರಾಟಗಳು ಆಗುತ್ತವೆ ಎಂದು ಮಾತನಾಡಿದ್ದಾರೆ. ಪ್ರಜ್ವಲ್ ಜಾಗದಲ್ಲಿ ಮುಸ್ಲಿಂ ವ್ಯಕ್ತಿ ಇದ್ದಿದ್ದರೆ ಹೋರಾಟ ಬೇರೆಯ ಸ್ವರೂಪವನ್ನೇ ಪಡೆದುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.