ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್‌ಮಸ್ ದಿನದಂದು ಬೆಳಗ್ಗೆ ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ನನ್ನ ಬಗ್ಗೆ ಚೆನ್ನಾಗಿ ತಿಳಿದುಕೊಂಡವರಿಗೆ ನಾನು ಝೋರೋನನ್ನು ಎಷ್ಟು ಪ್ರೀತಿಸುತ್ತಿದ್ದೆ ಅನ್ನೋ ವಿಷಯ ಗೊತ್ತಿದೆ. ಅವನಿಲ್ಲದೆ ನನ್ನ ಜೀವನಕ್ಕೆ ಅರ್ಥವೇ ಇಲ್ಲ ಎನಿಸುತ್ತಿದೆ. ನನ್ನ ಇಡೀ ಕುಟುಂಬ ಶಾಕ್‌ನಲ್ಲಿದೆ. ಸ್ವಲ್ಪ ಸಮಯ ನಾನು ನನ್ನ ಕುಟುಂಬ ಸಂಪರ್ಕಕ್ಕೆ ಸಿಗೋದಿಲ್ಲ. ಸಹಕರಿಸಿ ಎಂದು ನಟಿ ತ್ರಿಷಾ ಕೃಷ್ಣನ್ ಪೋಸ್ಟ್ ಮಾಡಿದ್ದಾರೆ.
ಹೌದು, ಝೋರೊ ತ್ರಿಷಾ ನೆಚ್ಚಿನ ನಾಯಿ. ಝೋರೊನನ್ನು ಮಗನಂತೆ ತ್ರಿಷಾ ಸಾಕಿದ್ದರು. 2012 ರಲ್ಲಿ ಜನಿಸಿದ್ದ ನಾಯಿ 2024ರ ಕ್ರಿಸ್‌ಮಸ್ ದಿನ ನಿಧನ ಹೊಂದಿದೆ. ತ್ರಿಷಾ ಕೃಷ್ಣನ್ ಮತ್ತೊಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ನಾಯಿಯ ಚಿತ್ರಗಳನ್ನು ಹಾಗೂ ತಮ್ಮ ಮುದ್ದಿನ ನಾಯಿಯ ಸಮಾಧಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ತ್ರಿಷಾ ಅವರ ಪೋಸ್ಟ್ಗೆ ನಟಿಯರಾದ ಹನ್ಸಿಕಾ, ಶ್ರೇಯಾ ಇನ್ನೂ ಕೆಲವು ನಟಿಯರು ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದು, ತ್ರಿಷಾಗೆ ಸಮಾಧಾನ ಹೇಳುವ ಜೊತೆಗೆ ಝೋರೊಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.