Saturday, February 4, 2023

Latest Posts

ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೈದ ಸೆಟ್ ನಲ್ಲಿ ಮತ್ತೆ ಚಿತ್ರೀಕರಣ ಆರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೈದ ಬಳಿಕ ಅನೇಕ ಆಗುಹೋಗುಗಳು ನಡೆದಿದ್ದು, ಅದ್ರಲ್ಲೂ ತುನಿಶಾ ಶರ್ಮಾ ತಾನು ನಟಿಸುತ್ತಿದ್ದ ʼಆಲಿ ಬಾಬಾʼ ಧಾರಾವಾಹಿಯ ಸೆಟ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಅದಾದ ಬಳಿಕ ಸೆಟ್‌ನಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೆ ಇದೀಗ ಚಿತ್ರತಂಡ ಮತ್ತೆ ಸೆಟ್‌ಗೆ ವಾಪಸಾಗಿದೆ.

ಈ ವಿಚಾರವನ್ನು ಧಾರಾವಾಹಿಯ ಇನ್ನೋರ್ವ ನಟಿಯಾಗಿರುವ ಸಯಂತಾನಿ ಘೋಷ್‌ ಅವರು ತಿಳಿಸಿದ್ದಾರೆ.’ಪೂರ್ತಿ ಸೆಟ್‌ಗೆ ಹೊಸದಾಗಿ ಬಣ್ಣ ಹೊಡೆಸಲಾಗಿದೆ. ಹೆಚ್ಚು ಲೈಟಿಂಗ್‌ಗಳನ್ನು ಹಾಕಲಾಗಿದೆ. ಹೊಸ ಹೊಸ ಸೆಟ್‌ ಹಾಕಿಸಿದ್ದಾರೆ. ತುನಿಶಾ ಆತ್ಮಹತ್ಯೆಗೆ ಶರಣಾದ ಸ್ಥಳದಲ್ಲಿ ಧಾರಾವಾಹಿಯ ತಂಡ ಪೂಜೆಯನ್ನೂ ಮಾಡಿಸಿದೆ. ಈಗ ನಾವು ಅಲ್ಲಿ ಚಿತ್ರೀಕರಣವನ್ನು ಮುಂದುವರಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ತುನಿಶಾ ಸಾವಿನ ನಂತರ ಚಿತ್ರತಂಡವು ಚಿತ್ರೀಕರಣವನ್ನು ಬೇರೆಡೆಗೆ ಸ್ಥಳಾಂತರ ಮಾಡಿತ್ತು. ಆದರೆ ಧಾರಾವಾಹಿ ದೃಷ್ಟಿಯಲ್ಲಿ ಅದು ಚಿತ್ರೀಕರಣ ಸ್ಥಳ ಬದಲಾವಣೆ ಸಾಕಷ್ಟು ತೊಂದರೆಯನ್ನುಂಟುಮಾಡಿತ್ತು. ಈ ಸ್ಥಳದಲ್ಲಿ ಅದೆಷ್ಟೇ ಸಮಸ್ಯೆ ಇದ್ದರೂ ಇಲ್ಲಿಗೆ ಮರಳಲೇಬೇಕಾದ ಅವಶ್ಯಕತೆ ಇತ್ತು ಎಂದು ಮಾಹಿತಿ ಕೊಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!