ಖಾಸಗಿ ವಿಡಿಯೋ ಲೀಕ್: ನಾನವನಲ್ಲ ಎಂದ ಪಾಕ್​ ತಂಡದ ನಾಯಕ ಬಾಬರ್​ ಅಜಮ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಯುವತಿಯೊಬ್ಬಳ ಜತೆ ವಿಡಿಯೊ ಕಾಲ್​ ಮಾಡುತ್ತಿರುವುದು ಎನ್ನಲಾದ ಖಾಸಗಿ ವಿಡಿಯೊವೊಂದು ಹರಿದಾಡುತ್ತಿದ್ದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್ ಅಜಮ್ (Babar Azam)​ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬ ಸೋಶಿಯಲ್​ ಮೀಡಿಯಾ ಪೋಸ್ಟ್​ ಮಾಡಿದ್ದಾರೆ.

ಜನವರಿ 16ರಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡೀಯೋ ವೈರಲ್​ ಆಗಿತ್ತು.

ಬಾಬರ್ ಅಜಮ್​ ತಮ್ಮ ತಂಡದ ಸಹ ಸದಸ್ಯನ ಗೆಳತಿಯ ಜತೆ ಚಾಟ್​ ಮಾಡಿದ್ದು, ಅವರಿಗೆ ನಗ್ನ ಚಿತ್ರಗಳು, ಅಶ್ಲೀಲ ಸಂದೇಶಗಳನ್ನು ಕಳುಹಿಸುವುದಕ್ಕೆ ಒತ್ತಾಯಿಸಿದ್ದರು ಎನ್ನಲಾಗಿದೆ. ಅಲ್ಲದೆ, ತನ್ನ ಗೆಳೆಯನನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಾದರ ಸೆಕ್ಸ್ಟಿಂಗ್​ ಮಾಡುವಂತೆ ಬಾಬರ್​ ಒತ್ತಾಯಿಸಿದ್ದರು ಎಂದೂ ಆರೋಪಿಸಲಾಗಿತ್ತು. ಈ ವಿಡಿಯೊ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿತ್ತು.

ಇದರಿಂದ ಬೇಸರಗೊಂಡಿರುವ ಅವರು ನದಿಯೊಂದರ ತಟದಲ್ಲಿ ತಾವು ಕುಳಿತಿರುವ ಚಿತ್ರವನ್ನು ಪೋಸ್ಟ್​ ಮಾಡಿ, ‘ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸಂತೋಷವಾಗಿರು’ ಎಂದು ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!