ಹೊಸದಿಗಂತ ಡಿಜಿಟಲ್ ಡೆಸ್ಕ್:
ಉರ್ಫಿ ಜಾವೇದ್ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ತಮ್ಮ ವಿಚಿತ್ರ ಬಟ್ಟೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಆದರೆ ಹಿಂದೆಂದೂ ಇಲ್ಲದಂತೆ ಈಕೆ ಧರಿಸಿದ್ದ ಬಟ್ಟೆ ನೋಡಿದವರು, ʻಉರ್ಫಿ ಇದು ನೀನೇನಾʼ ಎಂದು ಬಾಯ್ಮೇಲೆ ಬೆರಳಿಟ್ಟುಕೊಳ್ಳುವ ರೀತಿ ಬದಲಾಗಿದ್ದಾರೆ. ಸಲ್ವಾರ್ ಸೂಟ್ ಧರಿಸಿ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿರುವ ಫೋಟೋಗಳು ಸದ್ಯ ಸಖತ್ ವೈರಲ್ ಆಗುತ್ತಿವೆ.
ಸದಾ ಚಿತ್ರ-ವಿಚಿತ್ರವಾದ ಫ್ಯಾಶನ್ನೊಂದಿಗೆ ಬಟ್ಟೆಗಳನ್ನು ಧರಿಸಿ, ಸಾರ್ವಜನಿಕವಾಗಿ ಧೈರ್ಯದಿಂದ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರೂ ತಲೆಕೆಡಿಸಿಕೊಳ್ಳದ ಈಕೆ ಇತ್ತೀಚೆಗೆ ಧರಿಸಿದ ಬಟ್ಟೆಗೆ ನೆಟ್ಟಿಗರಿಂದ ಮೆಚ್ಚುಗೆ ಗಳಿಸಿದ್ದಾರೆ. ಗುಲಾಬಿ ಬಣ್ಣದ ಚೂಡಿದಾರ್ನಲ್ಲಿ ಉರ್ಫಿಯನ್ನು ಕಂಡು ಜನ ಸೋಜಿಗರಾದರು.
ಉರ್ಫಿ ಜಾವೇದ್ ‘ಬಿಗ್ ಬಾಸ್ OTT’ ನಲ್ಲಿ ಸ್ಪರ್ಧಿಯಾಗಿ ಫುಲ್ ಜನಪ್ರಿಯರಾದರು. ಎಲ್ಲಕ್ಕಿಂತ ಹೆಚ್ಚಾಗಿ, ತನ್ನ ವಿಚಿತ್ರವಾದ ಬಟ್ಟೆಯಿಂದಲೇ ಈಕೆ ಫೇಮಸ್ ಆದರು.