ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಇಂಫಾಲ್‌ನಲ್ಲಿ ರಕ್ತದ ಮಡುವಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ.
ಕಣ್ಣುಗಳಿಗೆ ಹಾಗೂ ಕೈಗಳಿಗೆ ಬಟ್ಟೆ ಕಟ್ಟಿ ಹತ್ಯೆ ಮಾಡಿದ್ದು, ಮೈತುಂಬಾ ಗಾಯದ ಗುರುಗಳಿವೆ. ತೈರೆನ್‌ಪೋಕ್ಟಿ ಪ್ರದೇಶದಲ್ಲಿ ಮಧ್ಯವಯಸ್ಕ ಮಹಿಳೆ ಹಾಗೂ ಪುರುಷನ ಶವ ಪತ್ತೆಯಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಂಫಾಲ್‌ನ ಪ್ರದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ.