ಸಾರಿ…ಐಮ್ ಸಾರಿ…ರಿಷಬ್ ಪಂತ್ ಬಳಿ ಕೈಮುಗಿದು ಕ್ಷಮೆಯಾಚಿಸಿದ ನಟಿ ಊರ್ವಶಿ ರೌಟೇಲಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಮತ್ತು ಪಾಕಿಸ್ತಾನದ ಕ್ರಿಕೆಟಿಗ ನಸೀಮ್ ಶಾ ಅವರ ಬಗ್ಗೆ ಮಾತನಾಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.

ಕೆಲವು ಸಮಯದ ಹಿಂದೆ ಊರ್ವಶಿ ಸಂದರ್ಶನವೊಂದರಲ್ಲಿ ರಿಷಭ್ ಪಂತ್ ಬಗ್ಗೆ ಕ್ರಿಕೆಟಿಗನಿಗೆ ಇಷ್ಟವಾಗದ ಒಂದು ಮಾತನ್ನ ಹೇಳಿದ್ದರು, ನಂತರ ರಿಷಭ್ ಪಂತ್ ಊರ್ವಶಿಗೆ ಸೂಕ್ತ ಉತ್ತರ ನೀಡಿದರು. ಇದರ ನಂತರ, ಊರ್ವಶಿ ಛೋಟು ಭಯ್ಯಾ ಎಂದು ಹೇಳುವ ಮೂಲಕ ಕ್ರಿಕೆಟ್‌ನತ್ತ ಗಮನ ಹರಿಸುವಂತೆ ರಿಷಭ್ ಪಂತ್‌ಗೆ ಸಲಹೆ ನೀಡಿದರು. ಅವರಿಬ್ಬರ ಈ ಯುದ್ಧವು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಯಿತು. ಆದ್ರೆ, ಏಷ್ಯಾ ಕಪ್ ಮುಗಿದ ನಂತರ, ಊರ್ವಶಿ ರಿಷಬ್ ಪಂತ್‌ಗೆ ಕ್ಷಮೆಯಾಚಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ರಿಷಭ್ ಪಂತ್‌ಗೆ ಒಂದು ಸಂದೇಶವನ್ನ ಹಂಚಿಕೊಳ್ಳಲು ಕೇಳಲಾಯಿತು, ಅದರಲ್ಲಿ ಊರ್ವಶಿ ಮೊದಲು ಗೊಂದಲಕ್ಕೊಳಗಾಗಿದ್ದರು. ನಂತರ, ರಿಷಭ್ ಪಂತ್ ಅವರ ಬಳಿ ಕ್ಷಮೆಯಾಚಿಸಿದರು. ‘ನಾನು ಹೇಳಬಯಸುವುದೇನೆಂದರೆ, ನಾನು ಏನು ಹೇಳಲಿ? ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ಕ್ಷಮಿಸಿ. ನನ್ನನ್ನು ಕ್ಷಮಿಸಿ ಎಂದು ನಟಿ ತನ್ನ ಕೈಮುಗಿದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅವರಿಬ್ಬರ ನಡುವಿನ ಜಗಳಕ್ಕೆ ಸಧ್ಯ ತೆರ ಬಿದ್ದಂತೆ ಕಾಣ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!