ಸೀಟ್ ಬೆಲ್ಟ್ ಧರಿಸಿದ್ದರೆ ನಟಿ ವೈಭವಿ ಪ್ರಾಣ ಉಳಿಯುತ್ತಿತ್ತು, ಅಪಘಾತದ ದಿನ ಏನೆಲ್ಲಾ ಆಗಿತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರಾಭಾಯ್ VS ಸಾರಾಭಾಯ್ ಖ್ಯಾತಿಯ ಕಿರುತೆರೆ ನಟಿ ವೈಭವಿ ಉಪಾಧ್ಯಾಯ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ನಿನ್ನೆ ಮುಂಬೈನಲ್ಲಿ ಅಂತ್ಯಕ್ರಿಯೆ ನೆರವೇರಿದೆ.

ಹೇಗಾಯ್ತು ಅಪಘಾತ?
ವೈಭವಿ ತನ್ನ ಭಾವೀ ಪತಿ ಜೊತೆ ಹಿಮಾಚಲ ಪ್ರದೇಶಕ್ಕೆ ತೆರಳಿದ್ದು, ಡಿಸೆಂಬರ್‌ನಲ್ಲಿ ಇವರ ಮದುವೆಯಾಗಬೇಕಿತ್ತು. ಮದುವೆ ಪ್ಲಾನ್ ಮಾಡೋದಕ್ಕೆ ಟ್ರಿಪ್ ಅರೇಂಜ್ ಮಾಡಿಕೊಂಡಿದ್ದರು. ಕಡಿದಾದ ರಸ್ತೆಯಲ್ಲಿ ಗಾಡಿ ಹೋಗುವಾಗ ಎದುರಿನಿಂದ ಟ್ರಕ್ ಬಂದಿದೆ. ಟ್ರಕ್ ಪಾಸ್ ಆದ ನಂತರ ಮುಂದಕ್ಕೆ ಹೋಗೋಣ ಎಂದು ಕಾರ್ ನಿಲ್ಲಿಸಿದ್ದಾರೆ. ಟ್ರಕ್ ಹೋಗುವಾಗ ಇವರ ಕಾರಿಗೆ ತಗುಲಿದ್ದು, ಕಾರ್ ಕಣಿವೆಗೆ ಜಾರಿ ಬಿದ್ದಿದೆ.

ಸೀಟ್ ಬೆಲ್ಟ್ ಧರಿಸಿಲ್ಲ
ಅಪಘಾತದ ವೇಳೆ ವೈಭರಿ ಭಾವಿ ಪತಿ ಸೀಟ್ ಬೆಲ್ಟ್ ಧರಿಸಿದ್ದರು. ಆದರೆ ವೈಭವಿ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹಾಗಾಗಿ ವೈಭವಿ ಗಂಭೀರವಾಗಿ ಗಾಯಗೊಂಡಿದ್ದರು. ವೈಭವಿ ಭಾವಿ ಪತಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್‌ಗಳಲ್ಲಿ ಸೀಟ್ ಬೆಲ್ಟ್ ಇರುವುದು ನಿಮ್ಮ ಸೇಫ್ಟಿಗಾಗಿ, ಯಾವುದೇ ಅಪಘಾತ ಸಂಭವಿಸುವುದಿಲ್ಲ ಎಂದು ನೀವು ಅಂದುಕೊಳ್ಳಬಹುದು, ಆದರೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು, ಸೀಟ್ ಬೆಲ್ಟ್ ಧರಿಸಿ, ರಸ್ತೆ ನಿಯಮ ಉಲ್ಲಂಘಿಸದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!