ಹೊಸದಿಗಂತ ಡಿಜಿಟಲ್ ಡೆಸ್ಕ್
ತೆಲಂಗಾಣದಲ್ಲಿ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿದ್ದು,ಭರ್ಜರಿ ಪ್ರಚಾರ ನಡೆಸುತ್ತಿದೆ. ಇದರ ನಡುವೆ ಬಿಜೆಪಿ ತೊರೆದಿದ್ದ ನಟಿ ಕಾಂಗ್ರೆಸ್‌ಗೆ ಬಲ ತುಂಬಲು ಮುಂದಾಗಿದ್ದಾರೆ.
ಕಾಲದ ಸೌತ್ ಸಿನಿಮಾಗಳ ಸೂಪರ್ ಸ್ಟಾರ್ ಆಗಿ ಮಿಂಚಿದ್ದ ನಟಿ ವಿಜಯಶಾಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದ್ದಾರೆ.
2009ರಲ್ಲಿ ಸಕ್ರಿಯ ರಾಜಕೀಯ ಜೀವನ ಆರಂಭಿಸಿದ್ದ ನಟಿ ವಿಜಯಶಾಂತಿ, 2020ರಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು & ಚ. ವಿದ್ಯಾಸಾಗರ ರಾವ್ ಅವರ ಜತೆ ಪಕ್ಷದಲ್ಲಿ ಸಕ್ರಿಯರಾಗಿದ್ರು. ಅಲ್ಲದೆ ಎಲ್.ಕೆ. ಅಡ್ವಾಣಿ ಅವರಿಗೆ ಆಪ್ತರಾಗಿದ್ದರು. ಬಳಿಕ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಧುಮುಕಿದ ವಿಜಯಶಾಂತಿ ತೆಲಂಗಾಣ ಪಕ್ಷ ಆರಂಭಿಸಿದರು. ಆ ಬಳಿಕ ತೆಲಂಗಾಣ ರಾಷ್ಟ್ರ ಸಮಿತಿ ಸೇರಿ, 2009ರಲ್ಲಿ ಮೇದಕ್ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಕೂಡ ಪ್ರವೇಶಿಸಿದರು. ನಂತರ 2014 ರ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಸೇರಿದ್ದರು.ಕಾಂಗ್ರೆಸ್ ಸೇರಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ವಿಜಯಶಾಂತಿ ಸೋತಿದ್ದರು. 2020 ರಲ್ಲಿ ಬಿಜೆಪಿ ಸೇರಿದ್ದರು. ಆದರೆ ಇತ್ತೀಚೆಗೆ ಬಿಜೆಪಿ ಪಕ್ಷವನ್ನೂ ತೊರೆದಿದ್ದ ನಟಿ ವಿಜಯಶಾಂತಿ, ಇದೀಗ ಕಾಂಗ್ರೆಸ್‌ಗೆ ವಾಪಸ್ ಬಂದಿದ್ದಾರೆ.