Sunday, December 10, 2023

Latest Posts

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ: ಕ್ರಿಕೆಟ್ ಅಭಿಮಾನಿಗಳಿಂದ ಶುಭಹಾರೈಕೆ

ಹೊಸದಿಗಂತ ವರದಿ, ಹುಬ್ಬಳ್ಳಿ:

ವಿಶ್ವಕಪ್ ಫೈನಲ್ ಭಾರತ ಹಾಗೂ ಆಸ್ಟೇಲಿಯಾ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ವಾಣಿಜ್ಯನಗರಿ ಹುಬ್ಬಳ್ಳಿಯ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡಕ್ಕೆ ಶುಭವಾಗಲಿ ಎಂಬ ಹಾರೈಕೆಯ ಸುರಿಮಳೆಗೈದಿದ್ದಾರೆ.

ಈ ಬಾರಿ ವಿಶ್ವಕಪ್ ಫೈನಲ್ ಪಂದ್ಯ ನ. ೧೯ ರಂದು ಗುಜರಾತನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹುಬ್ಬಳ್ಳಿ ಕ್ರಿಕೆಟ್ ಅಭಿಮಾನಿಗಳ ಹಾಗೂ ಜನಪ್ರತಿನಿಗಳು ಶನಿವಾರ ಮೈದಾನಕ್ಕಿಳಿದು ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ಕ್ರಿಕೆಟ್ ಪ್ರೀಯರು ಕೈಯಲ್ಲಿ ತ್ರೀವರ್ಣ ಧ್ವಜ ಹಾಗೂ ಭಾರತ ತಂಡ ಆಟಗಾರರ ಭಾವ ಚಿತ್ರಗಳ ಹಿಡಿದು, ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಈ ಬಾರಿ ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಸೋಲಿಲ್ಲದೆ ಫೈನಲ್ ಪ್ರವೇಶಿಸಿದೆ. ಪ್ರಸಕ್ತ ವರ್ಷದ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಕೋಟ್ಯಾಂತರ ಜನರ ಹಾರೈಕೆಯಿಂದ ಕಪ್ ಗೆದ್ದು, ವಿಶ್ವ ಪತಾಕೆ ಹಾರಿಸಲಿದೆ ಎಂದರು. ಕ್ರಿಕೆಟ್ ಅಭಿಮಾನಿಯೊಬ್ಬರು ಮಾತನಾಡಿ, ಭಾರತದ ತಂಡ ಇಡೀ ಲಿಗ್‌ನಲ್ಲಿ ಉತ್ತಮವಾಗಿ ಆಡಿದೆ. ಫೈನಲ್ ಪಂದ್ಯದಲ್ಲಿ ಆಸ್ಟೇಲಿಯಾ ವಿರುದ್ಧ ಜಯಗಳಿಸಿ ದೇಶಕ್ಕೆ ನಾಲ್ಕನೇ ವಿಶ್ವಕಪ್ ನೀಡಲಿದೆ ಎಂದು ತಿಳಿಸಿದರು. ಶಾಕರ ಮಹೇಶ ಟೆಂಗಿನಕಾಯಿ ಸ್ವತಃ ಕ್ರಿಕೆಟ್ ಆಡುವ ಮೂಲಕ ಸಂಭ್ರಮಿಸಿದರು. ಇಲ್ಲಿಯ ದೇಶಪಾಂಡೆ ನಗರದ ಜಿಮ್‌ಖಾನ್ ಮೈದಾನದಲ್ಲಿಯೂ ಸಹ ಅಂಥಹದೆ ಸಂಭ್ರಮ ಕಂಡು ಬಂದಿತು. ಇಲ್ಲಿ ನಿತ್ಯ ಕ್ರಿಕೆಟ್ ತರಬೇತಿ ಪಡೆಯುವ ವಿದ್ಯಾರ್ಥಿಗಳು ಸಹ ತ್ರೀವರ್ಣ ಧ್ವಜ ಹಾಗೂ ತಮ್ಮ ನೆಚ್ಚಿನ ಆಟಗಾರ ಭಾವಚಿತ್ರ ಹಿಡಿದ ಭಾರತ ಗೆದ್ದು ಬರಲಿ ಎಂದು ಹಾರೈಸಿದರು.

ಪೂಜೆ, ಹೋಮ, ಹವನಕ್ಕೆ ಸಿದ್ಧತೆ: ಭಾರತ ತಂಡ ವಿಶ್ವಕಪ್‌ನಲ್ಲಿ ಜಯಗಳಿಸಲು ಆಶಿಸಿ ನಗರದ ಹಲವು ಸಂಘಟನೆಗಳು ಭಾನುವಾರ ಬೆಳಿಗ್ಗೆ ಇಲ್ಲಿಯ ಕೋರ್ಟ್ ವೃತ್ತದ ಸಾಯಿ ಮಂದಿರ ಹಾಗೂ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ವಿಶೇಷ ಪೂಜೆ, ಹೋಮ ಹಾಗೂ ಹವನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೂ ಹೊಸೂರಿನ ವಾನಿವಿಲಾಸ ವೃತ್ತ ಹಾಗೂ ಸೇರಿದಂತೆ ಕೆಲವು ಕಡೆ ಫೈನಲ್ ಪಂದ್ಯ ವೀಕ್ಷಿಸಲು ದೊಡ್ಡ ಪರದೆಯ ವ್ಯವಸ್ಥೆ ಸಹ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!