ನಿಶ್ಚಿತಾರ್ಥ ಮಾಡಿಕೊಂಡ ಕಾಲಿವುಡ್​ನ ಜೋಡಿ ಆದಿ-ನಿಕ್ಕಿ ಗಲ್ರಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಕಾಲಿವುಡ್​ನ ಜೋಡಿ ಆದಿ ಪಿನಿಸೆಟ್ಟಿ ಮತ್ತು ನಿಕ್ಕಿ ಗಲ್ರಾನಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕುಟುಂಬದ ಸದಸ್ಯರು ಮತ್ತು ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟ ಆದಿ – ನಿಕ್ಕಿ ಜೋಡಿ , ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಮಗೆ ಆಶೀರ್ವಾದ ನೀಡಿ ಎಂದಿದ್ದಾರೆ.
ರೂಪದರ್ಶಿಯಾಗಿ ಗಮನ ಸೆಳೆದ ನಿಕ್ಕಿ ಗಲ್ರಾನಿ ಕನ್ನಡದ ಓ ಪ್ರೇಮವೇ, ಅಜೀತ್​, ಸಿದ್ಧಾರ್ಥ್, ಜಂಬೂ ಸವಾರಿ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ, ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ನಿಕ್ಕಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಆದಿ ಪಿನಿಸೆಟ್ಟಿ ಮತ್ತು ನಿಕ್ಕಿ ಗಲ್ರಾನಿ ಬಿಡುವಿನ ಸಮಯದಲ್ಲಿ ಹೊರಗಡೆ ಬಂದರೆ ಸಾಕು ಜೋಡಿಯಾಗಿಯೇ ಕ್ಯಾಮೆರಾ ಕಣ್ಣಿಗೆ ಕಾಣುತ್ತಿದ್ದರು.ಇದಕ್ಕೂ ಮುನ್ನ ಡೇಟಿಂಗ್​ನಲ್ಲಿವುದಕ್ಕೆ ಸಾಕ್ಷಿಯಾಗಿ ಈ ಜೋಡಿಯ ಹಲವು ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿದ್ದವು.ಸದ್ಯ ಇಬ್ಬರ ಮನೆಯಲ್ಲಿಯೂ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಆದಿ ಮತ್ತು ನಿಕ್ಕಿ ಮಲುಪು, ಯಾಗವರಾಯಿನುಂ ನಾ ಕಾಕ್ಕ, ಮರಗಧ ನಾನಯಂ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದರು.
ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸುವ ಮೂಲಕ ಬಹುಭಾಷಾ ತಾರೆಯಾಗಿರುವ ನಿಕ್ಕಿ ಗಲ್ರಾನಿ ಮೂಲ ಕನ್ನಡ ಅಂದರೆ ತಪ್ಪಾಗರದು. .ನಿಕ್ಕಿ ಗಲ್ರಾನಿಯು ‘ಗಂಡ ಹೆಂಡತಿ’ ಚಿತ್ರದಿಂದ ಕನ್ನಡದ ಸಿನಿಪ್ರಿಯರಿಗೆ ಪರಿಚಿತಗೊಂಡ ಸಂಜನಾ ಗಲ್ರಾನಿ ಅವರ ಸಹೋದರಿ.
ಸದ್ಯ ನಟಿ ನಿಕ್ಕಿ ತಮಿಳಿನ ಇಡಿಯಟ್​ ಹಾಗೂ ಮಲಯಾಳಿಯ ಮೇರಿ ಅವಾಜ್​ ಸುನೋ ಚಿತ್ರದಲ್ಲಿ ನಟಿಸುತ್ತಿದ್ದು ಪೋಸ್ಟ್​ ಪ್ರೊಡಕ್ಷನ್​ ಅಂಹದಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!