ಹೊಸದಿಗಂತ ವರದಿ,ತುಮಕೂರು:
ಅಮೆರಿಕಾದ ನ್ಯೂ ಜರ್ಸಿಯಲ್ಲಿ ಇರುವ ಆದಿಚುಂಚನಗಿರಿ ಶಾಖಾ ಮಠ ಹಾಗೂ ಶ್ರೀ ಸಾಯಿ ಕೃಪಾ ದೇವಾಲಯದ ವತಿಯಿಂದ ಜುಲೈ 28ರಂದು ನಡೆಯುತ್ತಿರುವ ಸತ್ಸಂಗ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ದಸರಿಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಪ್ರಸ್ತುತ ಅಮೆರಿಕಕ್ಕೆ ತಲುಪಿರುವ ಶ್ರೀಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀ ಮಠದ ವತಿಯಿಂದ ತಿಳಿಸಲಾಗಿದೆ.