ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾದ ಸ್ಟಾರ್ ಹೀರೋ ಪ್ರಭಾಸ್ ಹಾಗೂ ಓಂ ರಾವುತ್ ಜೋಡಿಯ ಬಿಗ್ ಬಜೆಟ್ ಸಿನಿಮಾ ಆದಿಪುರುಷ್ ಬರುತ್ತಿದೆ..ಈ ಸಿನಿಮಾಗಾಗಿ ಇಡೀ ಸಿನಿ ಜಗತ್ತು ಕಾತರದಿಂದ ಕಾಯುತ್ತಿದೆ. ಇದುವರೆಗೂ ಸಿನಿಮಾದಿಂದ ರಿಲೀಸ್ ಆಗಿರುವ ಎಲ್ಲಾ ಚಿತ್ರಗಳು ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾ ರಿಲೀಸ್ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಸಿನಿಮಾದ ಪ್ರಚಾರವನ್ನು ಚುರುಕುಗೊಳಿಸಲಾಗಿದೆ. ಜೂನ್ 6 ರಂದು ತಿರುಪತಿಯಲ್ಲಿ ಅದ್ಧೂರಿಯಾಗಿ ರಿಲೀಸ್ ಕಾರ್ಯಕ್ರಮ ನಡೆಯಲಿದೆ.
ಇದರ ಅಂಗವಾಗಿ ಆದಿಪುರುಷ ತಂಡ ತಿರುಪತಿ ತಲುಪಿದೆ. ಇಂದು ಸಂಜೆ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಇದರ ಭಾಗವಾಗಿ ಚಿತ್ರತಂಡ ಈಗಾಗಲೇ ತಿರುಪತಿ ತಲುಪಿದ್ದು, ಈ ಕ್ರಮದಲ್ಲಿ ಮಂಗಳವಾರ ಬೆಳಗ್ಗೆ ನಾಯಕ ಪ್ರಭಾಸ್ ತಿರುಮಲ ಶ್ರೀವಾರಿ ಭೇಟಿ ನೀಡಿದ್ದರು. ಬಳಿಕ ಟಿಟಿಡಿ ಅಧಿಕಾರಿಗಳು ಚಿತ್ರತಂಡಕ್ಕೆ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಿದರು..
ಪ್ರಭಾಸ್ ಆಗಮನದ ವಿಷಯ ತಿಳಿದ ಜನರು ಅವರನ್ನು ನೋಡಲು ಮುಗಿಬಿದ್ದರು. ವೈಕುಂಠಂ-1 ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಮಹಾ ದ್ವಾರದಿಂದ ಹೊರ ಬರುವಾಗ ಭಕ್ತರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗದೆ ನೂಕು ನುಗ್ಗಲು ಉಂಟಾಯಿತು. ಬಹಳ ಕಷ್ಟಪಟ್ಟು ಪ್ರಭಾಸ್ ನನ್ನು ದೇವಸ್ಥಾನದ ಮುಂಭಾಗದಿಂದ ರಂಭಾಗಿಚಾ ಗೇಟ್ ವರೆಗೆ ಕರೆತಂದು ಪೊಲೀಸರು ಕಾರಿನಲ್ಲಿ ಕಳುಹಿಸಿದರು. ಬಳಿಕ ಪ್ರಭಾಸ್ ಗೆಸ್ಟ್ ಹೌಸ್ ತಲುಪಿದರು. ಅತಿಥಿ ಗೃಹದ ಸುತ್ತಮುತ್ತ ಭಕ್ತರ ದಂಡು ನೆರೆದಿತ್ತು. ದರ್ಶನದ ವೇಳೆ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರ ಪುತ್ರ ಪ್ರಭಾಸ್ ಜೊತೆಗಿದ್ದರು.