ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಲಖನೌನ ಏಕಾನಾ ಸ್ಟೇಡಿಯಂ ಬಳಿ ಕಾರ್‌ನಲ್ಲಿ ತೆರಳುತ್ತಿದ್ದವರ ಮೇಲೆ ದೊಡ್ಡ ಜಾಹೀರಾತಿನ ಫಲಕ ಬಿದ್ದಿದೆ.
ಇದರಿಂದಾಗಿ ಕಾರ್‌ನಲ್ಲಿದ್ದ ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದಿರಾ ನಗರ ನಿವಾಸಿಗಳಾದ ಪ್ರೀತಿ ಹಾಗೂ ಅವರ ಮಗಳು ಏಂಜಲ್ ಮಾಲ್‌ಗೆ ತೆರಳುತ್ತಿದ್ದರು. ಕಾರ್ ಮೇಲೆ ಏಕಾಏಕಿ ಜಾಹೀರಾತು ಫಲಕ ಬಿದ್ದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಚಾಲಕ ಸರ್‌ತಾಜ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.