ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಡ ಈ ಬಾರಿ ಮತೆಣಿಕೆಯಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ.
ಬಿಜೆಪಿ-ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿರುವ ಇಲ್ಲಿ ಹಾವು ಏಣಿ ಆಟದಂತೆ ಮತ ಎಣಿಕೆ ಫಲಿತಾಂಶ ಹೊರಬೀಳುತ್ತಿದ್ದು, ಪ್ರತೀ ಐದು ನಿಮಿಷಕ್ಕೆ ಕಾಣಿಸಿಕೊಳ್ಳುತ್ತಿರುವ ಏರಿಳಿತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಹೆಚ್ಚಿಸಿದೆ. ಬೆಳಗ್ಗೆ 9:35ರ ತನಕ ಭರ್ಜರಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ನಂತರದ ಹೊತ್ತಿನಲ್ಲಿ ಸತತ ಹಿನ್ನಡೆ ಕಾಣುತ್ತಿದೆ.
ಬೆಳಗ್ಗೆ 9.15
ಬಿಜೆಪಿ 30, ಕಾಂಗ್ರೆಸ್ 49
ಬೆಳಗ್ಗೆ 9.35
ಬಿಜೆಪಿ 31, ಕಾಂಗ್ರೆಸ್ 59
ಬೆಳಗ್ಗೆ 10.05
ಬಿಜೆಪಿ 42, ಕಾಂಗ್ರೆಸ್ 46
ಬೆಳಗ್ಗೆ 10.06
ಬಿಜೆಪಿ 45, ಕಾಂಗ್ರೆಸ್ 44