ಶಿಕ್ಷಣದಿಂದ ಹಿಂದುಳಿದ ವರ್ಗಗಳ ಪ್ರಗತಿ ಸಾಧ್ಯ: ಶಾಸಕಿ ಪೂರ್ಣಿಮಾ ಶ್ರೀನಿವಾಸ

ಹೊಸದಿಗಂತ ವರದಿ,ಚಿತ್ರದುರ್ಗ

ಶಿಕ್ಷಣದಿಂದ ಹಿಂದುಳಿದ ವರ್ಗಗಳ ಪ್ರಗತಿ ಸಾಧ್ಯವೆಂದು ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಹಿಳೆಯರಿಗೆ ಕರೆ ನೀಡಿದರು.
ಚಿತ್ರದುರ್ಗದ ಮಡಿವಾಳ ಗುರುಪೀಠ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠವು ಏರ್ಪಡಿಸಿದ್ದ ಕಾಯಕ ಜನೋತ್ಸವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಮಟ್ಟದ ಪ್ರಪ್ರಥಮ ಮಾತೋಶ್ರೀ ಮಲ್ಲಿಗೆಮ್ಮ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಹಿಳೆಯರು ಗಟ್ಟಿಯಾಗಿ ಬೆಳೆಯಬೇಕೆಂದರು.
ಮಡಿವಾಳ ಮಹಿಳೆಯರು ಸಂಘಟಿತರಾಗಿ ಸಮುದಾಯವನ್ನು ಮತ್ತು ಮಡಿವಾಳ ಗುರುಪೀಠವನ್ನು ಗಟ್ಟಿಕೊಳಿಸಬೇಕು. ಸಮಾಜದಲ್ಲಿರುವ ಅಧಿಕಾರಿಗಳು, ಸ್ಥಿತಿವಂತರು ತಮ್ಮನ್ನು ತಮ್ಮ ಸಮಾಜವನ್ನು ಗೌರವಿಸಬೇಕು. ಮಠದ ಬಡಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗೆ ಕೈಲಾದ ಮಟ್ಟಿಗೆ ಹೆಚ್ಚಿನ ಧನಸಹಾಯ ನೀಡಿ ತಮ್ಮ ಸಮುದಾಯದ ಬಡಮಕ್ಕಳ ಕಲ್ಯಾಣ ಕಾರ್ಯಗಳಲ್ಲಿ ಕೈಗೂಡಿಸಬೇಕು ಎಂದು ಹೇಳಿದರು.
ಡಾ. ಬಸವ ಮಾಚಿದೇವ ಮಹಾಸ್ವಾಮಿಗಳವರು, ಕಲಘಟಗಿಯ ಗುರುದೇವ ತಪೋವನದ ಗುರುಮಾತಾ ನಂದಾತಾಯಿಯವರು, ಮಹಾರಾಷ್ಟ್ರದಲ್ಲಿ ವಿನೋಬಾಜಿ ಬ್ರಹ್ಮ ವಿದ್ಯಾಮಂದಿರದ ಸ್ವಾತಂತ್ರ್ಯ ಹೋರಾಟಗಾರರಾದ ಮಾತಾಜಿ ಚನ್ನಮ್ಮಾ. ಹಳ್ಳಿಕೇರಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಡಿವಾಳ ಮಹಿಳಾ ನಾಯಕಿಯರಾದ ವಿಜಯಲಕ್ಷ್ಮಿ ಅಂಜಿನಪ್ಪ, ಸುಗುಣಾ ಕೃಷ್ಣಪ್ಪ, ಯೋಗೀಶ್ವರಿ ವಿಜಯ, ನಿರ್ಮಲಾ ಗವಿಸಿದ್ದಪ್ಪ, ಸುಧಾರಾಣಿ ಈಶ್ವರ, ನಾಗರತ್ನಮ್ಮ ಮೈಸೂರು, ನಾಗಮ್ಮ ದಾವಣಗೆರೆ ಇವರುಗಳು ಉಪಸ್ಥಿತರಿದ್ದರು.
ಡಾ ವಿ. ಬಸವರಾಜ ಸ್ವಾಗತಿಸಿದರು. ಮಂಜುನಾಥ ಎ.ಆರ್. ವಂದಿಸಿದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!