ಏರ್‌ಪೋರ್ಟ್‌ನಲ್ಲಿ ಜನಜಂಗುಳಿ: ಕನಿಷ್ಠ ಮೂರುವರೆ ಗಂಟೆ ಮೊದಲು ತಲುಪಲು ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಕನಿಷ್ಠ ಮೂರುವರೆ ಗಂಟೆ ಮೊದಲು ವಿಮಾನ ನಿಲ್ದಾಣ ತಲುಪಿ ಎಂದು ದೆಹಲಿ ವಿಮಾನಯಾನ ಸಂಸ್ಥೆ ಮನವಿ ಮಾಡಿದೆ.

ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದು ಹಾಗೂ ಚೆಕ್‌ಇನ್‌ನಲ್ಲಿ ಭಾರೀ ವಿಳಂಬವಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ಮಂದಿ ಸಾಮಾಜಿಕ ಮಾಧ್ಯಮದಲ್ಲಿ ದೂರುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಕಡಿವಾಣ ಹಾಕಲು ಮೂರುವರೆ ಗಂಟೆ ಮುಂಚೆ ಬನ್ನಿ ಎಂದು ಸಂಸ್ಥೆ ಸೂಚಿಸಿದೆ.

Imageಬೇಗ ಬನ್ನಿ ಹಾಗೂ ಒಂದೇ ಲಗೇಜ್ ತನ್ನಿ ಎಂದು ಸಂಸ್ಥೆ ಮನವಿ ಮಾಡಿದೆ. ಚೆಕ್‌ಇನ್ ಅಂದುಕೊಂಡ ಸಮಯಕ್ಕೆ ಆಗುತ್ತಿಲ್ಲ, ದೀರ್ಘ ಕ್ಯೂನಿಂದ ಪ್ರಯಾಣಿಕರು ಬೇಸತ್ತಿದ್ದಾರೆ. ಈ ಬಗ್ಗೆ ಫೋಟೊ, ವಿಡಿಯೋಗಳನ್ನು ಮಾಡಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಹಾಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!