Aero India 2023 : ಬಿಎಂಟಿಸಿಯಿಂದ ಹೆಚ್ಚುವರಿ‌ ವಿಶೇಷ ಬಸ್ ವ್ಯವಸ್ಥೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋಗೆ ಬಿಎಂಟಿಸಿಯಿಂದ ಹೆಚ್ಚುವರಿ‌ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ.13 ರಿಂದ 17 ರವರೆಗೆ ಏರ್ ಶೋ ನಡೆಯಲಿದೆ. ಏರ್ ಶೋ ವೀಕ್ಷಿಸಲು ಹೆಚ್ಚಿನ ಜನದಟ್ಟಣೆ ಆಗಮಿಸುವುದರಿಂದ 10 ಹೆಚ್ಚುವರಿ ಬಸ್ ಬಿಡಲು ಬಿಎಂಟಿಸಿ ಮುಂದಾಗಿದೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ ವಿವಿಧ ಭಾಗದಿಂದ ಯಲಹಂಕಕ್ಕೆ 10 ಹೆಚ್ಚುವರಿ ಬಸ್ ವ್ಯವಸ್ಥೆ

ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಶಿವಾಜಿನಗರ, ಹೆಬ್ಬಾಳ, ಬನಶಂಕರಿ ಟಿಟಿಎಂಸಿ, ಯಲಹಂಕ ಎನ್ ಇ ಎಸ್, ಕೆಂಗೇರಿ, ಟಿನ್ ಫ್ಯಾಕ್ಟ್ರಿ ಹಾಗೂ ಯಶವಂತಪುರದಿಂದ ಬಸ್​ ಬಿಡಲಾಗಿದೆ. ಏರ್ ಶೋಗೆ ಹೋಗುವವರು ಬಸ್​ ನಿಲ್ದಾಣದವರೆಗೆ ತಮ್ಮ ಸ್ವಂತ ವಾಹನದಲ್ಲಿ ಬಂದು, ಅಲ್ಲಿಂದ ಬಸ್​​ನಲ್ಲಿ ಹೋಗವವರಿಗೆ ನಿಲ್ದಾಣದಲ್ಲಿ ಪಾರ್ಕಿಂಗ್​ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಯಶವಂತಪುರ, ಶಾಂತಿನಗರ, ಜಯನಗರ, ಕೋರಮಂಗಲ, ಕೆಂಗೇರಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!