ಅಧಿಕ ತಾಪಮಾನದಿಂದಾಗಿ ಏರೋ ಇಂಡಿಯಾ ಪ್ರದರ್ಶನ ಸ್ಥಳ -ಸಮಯ ಬದಲಾಯಿಸಲು ಸಲಹೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಏರೋ ಇಂಡಿಯಾವನ್ನು ಪ್ರದರ್ಶನವು ಸದ್ಯ ಏರ್ ಫೋರ್ಸ್ ಸ್ಟೇಷನ್ ಯಲಹಂಕದಲ್ಲಿ ನಡೆಯುತ್ತಿದೆ, ಆದರೆ ಮುಂದಿನ ಬಾರಿ ನಡೆಯಲಿರುವ ವೈಮಾನಿಕ ಪ್ರದರ್ಶನವನ್ನು ಬೇರೆ ಸ್ಥಳಕ್ಕೆ ಶಿಫ್ಟ್ ಮಾಡಬೇಕು ಹಾಗೂ ಕಾರ್ಯಕ್ರಮವನ್ನು ಫೆಬ್ರವರಿ ಬದಲಿಗೆ ಡಿಸೆಂಬರ್ ನಲ್ಲಿ ಆಯೋಜಿಸುವಂತೆ ವಿವಿಧ ಸರ್ಕಾರಿ ಏಜೆನ್ಸಿಗಳು ಅಭಿಪ್ರಾಯ ವ್ಯಕ್ತ ಪಡಿಸಿವೆ.

ಕೇಂದ್ರ ಗೃಹ ಮತ್ತು ಭೂ ವಿಜ್ಞಾನ ಸಚಿವಾಲಯಗಳ ಅಧೀನದಲ್ಲಿರುವ ವಿಪತ್ತು ನಿರ್ವಹಣೆಯ ಅಧಿಕಾರಿಗಳು ಮತ್ತು ರಾಜ್ಯ ಕಂದಾಯ, ಸಂಚಾರ ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು 2025ರ ಏರೋ ಇಂಡಿಯಾ ಕಾರ್ಯಕ್ರಮದ ಪರಿಶೀಲನೆ ನಡೆಸಿದರು, ಮುಖ್ಯವಾಗಿ ಎಎಸ್‌ಎಫ್‌ವೈ ಹೊರಗೆ ಮತ್ತು ಒಳಗೆ ಟ್ರಾಫಿಕ್ ಚಾಕ್ ಮತ್ತು ಬ್ಲಾಕ್ ಪಾಯಿಂಟ್‌ಗಳು, ಆರೋಗ್ಯದ ಮೇಲೆ ಪರಿಣಾಮ ಬೀರುವ ಹವಾಮಾನ ಪರಿಸ್ಥಿತಿಗಳು ಹಾಗೂ ಪಾರ್ಕಿಂಗ್ ಪ್ರದೇಶ, ವೈಮಾನಿಕ ಪ್ರದರ್ಶನ ವೀಕ್ಷಣಾ ಪ್ರದೇಶ, ಫುಡ್ ಕೋರ್ಟ್ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ಏಜೆನ್ಸಿಗಳು ಸಲಹೆ ನೀಡಿವೆ.

ಬೆಂಗಳೂರು ನಗರದ ಅನಿಯಂತ್ರಿತ ಬೆಳವಣಿಗೆ ಮತ್ತು ಅದರ ಟ್ರಾಫಿಕ್ ಕಿರಿಕಿರಿ ಕಾರಣದಿಂದಾಗಿ ಏರ್‌ಶೋ ಆಯೋಜಿಸಲು ಇನ್ನು ಮುಂದೆ ಈ ಸ್ಥಳ ಸೂಕ್ತವಲ್ಲ ಎಂದು ತೋರಿಸಿದೆ. ವೈಮಾನಿಕ ಪ್ರದರ್ಶನದ ಎಲ್ಲಾ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ವರದಿಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅಧಿಕೃತ ವಿಮರ್ಶೆಯ ವಿಭಾಗಕ್ಕೆ ತಿಳಿಸಿದೆ.

ಫೆಬ್ರವರಿ ಬದಲು ಡಿಸೆಂಬರ್‌ನಲ್ಲಿ ಏರ್‌ಶೋ ನಡೆಸಬಹುದೇ ಎಂದು ಸೂಚಿಸಲು ನಾವು ಯೋಚಿಸುತ್ತಿದ್ದೇವೆ. ಏರೇ ಶೋಗೆ ಆಕಾಶವು ಸ್ಷಷ್ಟವಾಗಿ ಕಾಣುವ ಅವಶ್ಯಕತೆಯಿದೆ ಎಂದು ಇನ್ನೊಬ್ಬ ಹಿರಿಯ ಸರ್ಕಾರಿ ತಿಳಿಸಿದ್ದಾರೆ. ಆರಂಭದಲ್ಲಿ, ಸ್ಪಷ್ಟವಾದ ನೀಲಿ ಆಕಾಶ ಮತ್ತು ಅನುಕೂಲಕರ ಹವಾಮಾನದಿಂದಾಗಿ ಫೆಬ್ರವರಿಯನ್ನು ಏರ್‌ಶೋಗೆ ಸೂಕ್ತ ತಿಂಗಳು ಎಂದು ಆಯ್ಕೆ ಮಾಡಲಾಯಿತು. ಆದರೆ ವರ್ಷಗಳು ಕಳೆದಂತೆ, ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಯಿಂದಾಗಿ, ಫೆಬ್ರವರಿಯಲ್ಲಿ ತಾಪಮಾನ ಹೆಚ್ಚು ಬಿಸಿಯಿರುತ್ತದೆ. ಹೀಗಾಗಿ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಅನೇಕ ಜನರು ದೂರುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!