ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಪ್ರಕರಣ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಸರ್ಕಾರದ ಎಸಿಎಸ್, ಗೃಹ ಇಲಾಖೆ ಅಧಿಕಾರಿಗಳು, ಡಿಜಿಪಿ ಅಲೋಕ್ ಮೋಹನ್, ಎಡಿಜಿಪಿ, ಮೈಸೂರು ಡಿಸಿ ಹಾಗೂ ಕಮಿಷನರ್ ಭಾಗಿಯಾಗಲಿದ್ದಾರೆ.
ಕೋಮು ಗಲಭೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಂಡಿರುವ ಬಗ್ಗೆ, ಎಷ್ಟು ಮಂದಿ ಆರೋಪಿಗಳ ಬಂಧನ ಆಗಿದೆ. ಘಟನೆ ನಡೆಯಲು ಕಾರಣವಾದ ಅಂಶ ಯಾವುದು? ಕಲ್ಲು ಸಂಗ್ರಹ ಮಾಡಿದವರು ಯಾರು? ಎಂಬ ಮಾಹಿತಿಯನ್ನು ಸಿಎಂ ಸಭೆಯಲ್ಲಿ ಪಡೆಯಲಿದ್ದಾರೆ.