Friday, March 31, 2023

Latest Posts

ಏರೋ ಇಂಡಿಯಾ ಶೋ : ಮೂರು ದಿನಗಳಲ್ಲಿ ಬರೋಬ್ಬರಿ 80 ಸಾವಿರ ಕೋಟಿ ರೂ. ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಏರ್‌ಶೋ ನಡೆಯುತ್ತಿದೆ.
ಯಲಹಂಕದ ವಾಯುನೆಲೆಯಲ್ಲಿ ಏರ್‌ಶೋ ನಡೆಯುತ್ತಿದ್ದು, ಮೂರು ದಿನಗಳಲ್ಲಿ ಏರ್ ಶೋ ಭಾರೀ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿದೆ.

ಬಾನಂಗಳಲ್ಲಿ ಯುದ್ಧ ವಿಮಾನಗಳ ಕಸರತ್ತು ನೋಡೋದಕ್ಕೆ ಸಾರ್ವಜನಿಕರೂ ಆಸಕ್ತರಾಗಿದ್ದು,ಇಂದಿನಿಂದ ಸಾರ್ವಜನಿಕರಿಗೂ ಏರ್‌ಶೋ ವೀಕ್ಷಣೆಗೆ ಅವಕಾಶ ದೊರೆತಿದೆ.

ಮೂರು ದಿನದಲ್ಲಿ 80 ಸಾವಿರ ಕೋಟಿ ರೂ. ಒಪ್ಪಂದ ಆಗಿದ್ದು, 226 ಸಹಭಾಗಿತ್ವ,201 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದು ಯುದ್ಧ ವಿಮಾನಗಳ ಖರೀದಿ, ನಿರ್ಮಾಣ ಸಂಬಂಧ ಏರೋ ಇಂಡಿಯಾದಲ್ಲಿ ಕಂಪನಿಗಳ ನಡುವೆ ಪರಸ್ಪರ ಒಪ್ಪಂದವಾಗಿದೆ.

ಈ ಬಾರಿ ಏರ್‌ಶೋನಲ್ಲಿ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಗಳು ಭಾರೀ ಹೆಸರು ಮಾಡಿದ್ದು, ವಿದೇಶಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!