ತ್ರಿಪುರಾ ವಿಧಾನಸಭೆ ಚುನಾವಣೆ: ಅಗರ್ತಲಾದಲ್ಲಿ ಮತ ಚಲಾಯಿಸಿದ ಸಿಎಂ ಮಾಣಿಕ್ ಸಹಾ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತ್ರಿಪುರಾದ 60 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಹಿನ್ನೆಲೆ ಮುಖ್ಯಮಂತ್ರಿ ಮಾಣಿಕ್ ಸಹಾ ಅಗರ್ತಲಾದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಮತದಾನ ಆರಂಭವಾದ ಬೆನ್ನಲ್ಲೇ ಅವರು ಮತ ಚಲಾಯಿಸಿದ್ದು ಗಮನಾರ್ಹ. ತ್ರಿಪುರಾ ಪ್ರತಿ ಬಾರಿಯೂ ಅತಿ ಹೆಚ್ಚು ಶೇಕಡಾವಾರು ಮತಗಳನ್ನು ದಾಖಲಿಸಿದೆ. ಈ ಬಾರಿ ಶೇ.90ಕ್ಕೂ ಹೆಚ್ಚು ಮತದಾನ ದಾಖಲಾಗಲಿದೆ ಎಂದರು. ಇದೇ ವೇಳೆ, 25 ವರ್ಷಗಳ ಕಮ್ಯುನಿಸ್ಟ್ ಆಡಳಿತವನ್ನು ಕಿತ್ತೊಗೆದ ಭಾರತೀಯ ಜನತಾ ಪಕ್ಷವು ಸತತ ಎರಡನೇ ಬಾರಿಗೆ ಕೇಸರಿ ಬಾವುಟ ಹಾರಿಸಲು ಉತ್ಸುಕವಾಗಿದೆ.

ತ್ರಿಪುರಾದಾದ್ಯಂತ 3,337 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 17ರ ಸಂಜೆ 6ರವರೆಗೆ ನಿಷೇಧಾಜ್ಞೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!