ವಿದೇಶಿ ಅಡಿಕೆ ಗುಣಮಟ್ಟ ಪ್ರಶ್ನಿಸಿ ಸುಪ್ರಿಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ: ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಡಿಕೆಯಲ್ಲಿ ಹಲವು ಆರೋಗ್ಯಕರ ಅಂಶವಿದೆ ಎನ್ನುವುದು ಸಂಶೋಧನೆಗಳು ಹೊರ ಬರುತ್ತಿದ್ದು, ಅಡಿಕೆ ಹಾನಿಕಾರಕವಲ್ಲ ಎನ್ನುವ ಕುರಿತು ಹಲವು ಸಂಶೋಧನೆಗಳು ಬಂದಿರುವ ಕುರಿತು ಸುಪ್ರಿಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ರಾಘವೇಂದ್ರ ಮಠದಲ್ಲಿ ಪರಿವಾರ ಸಹಕಾರಿ ಸಂಘ ನಿಯಮಿತ ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವಿದೇಶಿ ಅಡಿಕೆ ಗುಣಮಟ್ಟವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಗೆ ಸಲ್ಲಿಸಿದ್ದೇವೆ. ಇಂಡೋನೇಶಿಯಾ ಸೇರಿದಂತೆ ಹೊರ ದೇಶದಿಂದ ಬರುವ ಅಡಿಕೆಯ ಕಳಪೆ ಗುಣಮಟ್ಟದ್ದು ಎಂದು ಕಂಡು ಹಿಡಿದಿದು ಇದನ್ನು ಸುಪ್ರಿಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದೇವೆ.
ಹೊರ ದೇಶದ ಅಡಿಕೆ ಆಮದು ಸಂಬಂಧಿಸಿದಂತೆ ಈಗಾಗಲೇ ಕೆಲವು ದೇಶಗಳೊಂದಿಗೆ ಒಪ್ಪಂದ ಇರುವುದರಿಂದ ಬರುತ್ತಿದೆ. ಆದರೆ ಗುಣಮಟ್ಟ ಪರೀಕ್ಷೆ ನಡೆಸಿ ಅದನ್ನು ತಿರಸ್ಕರಿಸುವ ಮೂಲಕ ಅಡಿಕೆ ಬೆಳೆಗಾರರ ರಕ್ಷಾ ಕವಚವಾಗಿ ಸರಕಾರ ಕೆಲಸ ಮಾಡಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!