‘ಮಹಾರಾಜ ಎಲ್ಲಿದ್ದರೂ ಮಹಾರಾಜ’: ಇಂಡಿಯಾ- ಪಾಕ್ ಮ್ಯಾಚ್ ಗೆ ಸಾಕ್ಷಿಯಾದ ಸುದೀಪ್​-ಪ್ರಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಕಿಚ್ಚ ಸುದೀಪ್ ಅವರು ಸದ್ಯ ಸಿನಿಮಾ ಹಾಗೂ ಬಿಗ್ ಬಾಸ್ ಕೆಲಸಗಳಿಂದ ಬ್ರೇಕ್​ ತೆಗೆದುಕೊಂಡಿದ್ದಾರೆ. ಪತ್ನಿ ಪ್ರಿಯಾ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಆಸ್ಟ್ರೇಲಿಯಾಗೆ ತೆರಳಿದ್ದರು.

ಹೀಗಾಗಿ ಇಂದು ಆಸ್ಟ್ರೇಲಿಯಾ ನಡೆಯುತ್ತಿದ್ದ ಭಾರತ ಹಾಗೂ ಪಾಕ್ ನಡುವಣ ವಿಶ್ವಕಪ್​ ಮ್ಯಾಚ್​ ನೋಡಲು ತೆರಳಿದ್ದರು.
ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟೀಂ ಇಂಡಿಯಾ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಕಂಡಿದೆ. ವಿರಾಟ್ ಕೊಹ್ಲಿ ಅವರ ಅಜೇಯ 82 ರನ್​ಗಳ ಆಟವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಸುದೀಪ್ ಕೂಡ ಕೊಹ್ಲಿ ಆಟವನ್ನು ಮೆಚ್ಚಿದ್ದಾರೆ.

ಸುದೀಪ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ‘ಮಹಾರಾಜ ಎಲ್ಲಿದ್ದರೂ ಮಹಾರಾಜ ತಾನೇ. ಕಿಂಗ್ ಕೊಹ್ಲಿ. ಈ ಪಂದ್ಯವನ್ನು ಸ್ಟೇಡಿಯಂನಲ್ಲಿ ಲೈವ್ ವೀಕ್ಷಿಸಿದ್ದು ನಿಜಕ್ಕೂ ಗೌರವ. ಹ್ಯಾಟ್ಸ್​ ಆಫ್​ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!