ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಅಫ್ಘಾನಿಸ್ತಾನ..!

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮಂಗಳವಾರ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಟಿ 20 ವಿಶ್ವಕಪ್ ನ ಸೂಪರ್ 12 ಹಂತದ ಪಂದ್ಯದಲ್ಲಿ ಶ್ರೀಲಂಕಾ ಆರು ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿತು. ಈ ಸೋಲಿನಿಂದ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅಫ್ಘಾನ್ 20 ಓವರ್‌ಗಳಲ್ಲಿ ಕೇವಲ 144/8 ಗಳಿಸಲಷ್ಟೇ ಶಕ್ತವಾಯಿತು. ರಹಮಾನುಲ್ಲಾ ಗುರ್ಬಾಜ್ 24 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 28 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ ಗಳು ಮಿಂಚಲಿಲ್ಲ. ಶ್ರೀಲಂಕಾ ಪರ ಬೌಲಿಂಗ್‌ ನಲ್ಲಿ ಮ್ಯಾಜಿಕ್‌ ಮಾಡಿದ ವನಿಂದು ಹಸರಂಗಾ  4 ಓವರ್​ಗಳಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಪಡೆದರೆ, ಲಹಿರು ಕುಮಾರ ಎರಡು ವಿಕೆಟ್ ಪಡೆದರು.
145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 148 ರನ್ ಗಳಿಸಿತು, ಧನಂಜಯ ಡಿ ಸಿಲ್ವಾ 42 ಎಸೆತಗಳಲ್ಲಿ 66 ರನ್ ಗಳಿಸಿ ಅಜೇಯರಾಗುಳಿದರು. ಅಫ್ಘಾನಿಸ್ತಾನ ಪರ ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ ತಲಾ ಎರಡು ವಿಕೆಟ್ ಪಡೆದರು.
ಅಫ್ಘಾನಿಸ್ತಾನ ತಂಡ ಆಡಿರುವ 4 ಪಂದ್ಯಗಳಲ್ಲಿ ಕೇವಲ 2 ಅಂಕ ಗಳಿಸಲಷ್ಟೇ ಶಕ್ತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಮಳೆಯಿಂದಾಗಿ ಒಂದು ಪಂದ್ಯ ರದ್ದಾದ ಕಾರಣ ಅಘ್ಘಾನ್‌ 2 ಅಂಕಗಳನ್ನು ಪಡೆದಿದೆ.. ಅಫ್ಘಾನ್ ತಂಡಕ್ಕೆ ಇದು ಟೂರ್ನಿಯಲ್ಲಿ ಎರಡನೇ ಸೋಲಾಗಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 4 ಅಂಕಗಳಿಸಿರುವ ಶ್ರೀಲಂಕಾ ಸೆಮೀಸ್‌ ಆಸೆಯನ್ನು ಜೀವಂತವಾಗಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!