ವಿಂಡೀಸ್ ವಿರುದ್ಧದ ಮೂರನೇ ಪಂದ್ಯ ಗೆದ್ದ ಭಾರತ: ಟಿ20 ಕ್ರಿಕೆಟ್‌ನಲ್ಲಿ ಭಾರತ ಇದೀಗ ನಂ.1

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ-20 ಕದನದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಈ ಮೂಲಕ ಚುಟುಕು ಸರಣಿಯಲ್ಲೂ ಕೆರಿಬಿಯನ್ನರನ್ನು ತಂಡ ಕ್ಲೀನ್‌ಸ್ವೀಪ್ ಮಾಡಿದೆ. ಐಸಿಸಿ ರ‍್ಯಾಂಕಿಂಗ್‌ನ ಟಿ-20 ಕ್ರಿಕೆಟ್‌ನಲ್ಲಿ ಭಾರತ ಇಂಗ್ಲೆಂಡ್‌ನ್ನು ಹಿಂದಿಕ್ಕಿ ನಂ.1 ತಂಡವಾಗಿ ಹೊರಹೊಮ್ಮಿದೆ.

ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ ಗೆಲುವಿನ ಹಾದಿ ಹಿಡಿದಿದೆ. ಈ ಜಯದ ಜೊತೆ ನಂ.1 ತಂಡ ಆಗುವ ಮೂಲಕ ದಾಖಲೆ ಬರೆದಿದೆ.
ಈ ಮಧ್ಯೆ ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆಯೂ ಮೆಚ್ಚುಗೆ ಕೇಳಿಬರುತ್ತಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮಾಡಿದ ಮೊದಲ ಭಾರತೀಯ ನಾಯಕ ರೋಹಿತ್ ಶರ್ಮಾ, ಜೊತೆಗೆ ಟಿ-20 ತಂಡವನ್ನು ಮುನ್ನಡೆಸಿದ ಮೊದಲ ಮೂರು ಸರಣಿಯಲ್ಲೂ ಕ್ಲೀನ್‌ಸ್ವೀಪ್ ಸಾಧನೆ ಮಾಡಿದ ಮೊದಲ ಪ್ಲೇಯರ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!