ಟೊಮ್ಯಾಟೊ ಬೆಲೆ ಏರಿಕೆ ಎಫೆಕ್ಟ್, ವೆಜ್ ಥಾಲಿಗಳ ಬೆಲೆ ಶೇ.34ರಷ್ಟು ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೊಮ್ಯಾಟೊ ಬೆಲೆ ಏರಿಕೆಯಿಂದಾಗಿ ಹೊಟೇಲ್ ಊಟದ ಮೇಲೆ ಭಾರೀ ಪರಿಣಾಮ ಬಿದ್ದಿದೆ. ಅದರಲ್ಲಿಯೂ ವೆಜ್ ಊಟ ದುಬಾರಿಯಾಗಿದೆ.

ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಸಸ್ಯಹಾರಿ ಥಾಲಿಗಳ ಬೆಲೆ ಶೇ. 34ರಷ್ಟು ಏರಿಕೆಯಾಗಿದೆ. ಇನ್ನು ನಾನ್ ವೆಜ್ ಥಾಲಿ ಬೆಲೆ ಶೇ. 13ರಷ್ಟು ಏರಿಕೆಯಾಗಿದೆ.

ಎಲ್ಲದಕ್ಕೂ ಟೊಮ್ಯಾಟೊ ಬೆಲೆ ಏರಿಕೆ ಪ್ರಮುಖ ಕಾರಣವಾಗಿದೆ. ಜೂನ್‌ನಲ್ಲಿ ಕೆಜಿಗೆ 33 ರೂಪಾಯಿ ಇದ್ದ ಟೊಮ್ಯಾಟೊ ದರ ಜುಲೈನಲ್ಲಿ 110 ರೂಪಾಯಿಗಳಾಗಿತ್ತು. ಹಾಗಾಗಿ ಹೊಟೇಲ್ ಊಟದ ಬೆಲೆಯೂ ದುಬಾರಿಯಾಗಿದೆ. ಈ ಬಗ್ಗೆ ರೇಟಿಂಗ್ ಏಜೆನ್ಸಿ ಮಾಹಿತಿ ನೀಡಿದ್ದು, ವೆಜ್ ಥಾಲಿಯ ದರ ಶೇ. 34ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!