ಪುಟ್ಟ ಅಭಿಮಾನಿಯ ಸಾವಿಗೆ ಮರುಗಿದ ಆಫ್ರಿಕಾ ಕ್ರಿಕೆಟರ್ ಡೇವಿಡ್ ಮಿಲ್ಲರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್‌ ಡೇವಿಡ್ ಮಿಲ್ಲರ್ ಅವರ ಪುಟ್ಟ ಅಭಿಮಾನಿಯೊಬ್ಬರು ಮಾರಕ ಕ್ಯಾನ್ಸರ್​ನಿಂದ ಅಸುನೀಗಿದ್ದಾರೆ.
ಈ ಕುರಿತು ಶನಿವಾರಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ಮಿಲ್ಲರ್ ಅಭಿಮಾನಿ ಆ್ಯನೆ ಕ್ಯಾನ್ಸರ್ ವಿರುದ್ದ ಹೋರಾಡುತ್ತಿದ್ದರು. ಇದೀಗ ಮಿಲ್ಲರ್ ಆ್ಯನೆ ಸಾವಿನ ಬಗ್ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ.

ಮಿಲ್ಲರ್‌ ಮೊದಲಿಗೆ ಹಂಚಿಕೊಂಡ ಸುದ್ದಿ ನೋಡಿದ ಫ್ಯಾನ್ಸ್‌, ಮಿಲ್ಲರ್ ಪುತ್ರಿಯೇ ಕೊನೆಯುಸಿರೆಳೆದಿದ್ದರು ಎಂದು ಭಾವಿಸಿದ್ದರು.

‘RIP ನನ್ನ ಲಿಟ್ಲ್‌ ರಾಕ್‌ಸ್ಟಾರ್, ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಅಭಿಯೊಂದಿಗಿನ ಫೋಟೋವನ್ನು ಡೇವಿಡ್ ಮಿಲ್ಲರ್ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಡೇವಿಡ್ ಮಿಲ್ಲರ್,ನನ್ನ ಪುಟ್ಟ ರಾಕ್‌ಸ್ಟಾರ್. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ನೀನು ಬದುಕಿದ ದಿನಗಳು ಎಂತಹ ಕಷ್ಟಕರವಾಗಿದ್ದವು ಎಂದು ನಾನು ಬಲ್ಲೆ. ನಿನ್ನ ಜೀವನೋತ್ಸಾಹವನ್ನು ಕಂಡಿದ್ದೇನೆ. ನೋವಿನಲ್ಲೂ ನಗು, ಸಕಾರಾತ್ಮಕ ಯೋಚನೆ ನಿನ್ನ ಮುಖದ ಮೇಲಿತ್ತು. ನಿನ್ನೊಂದಿಗೆ ಕಳೆದ ದಿನಗಳು ಅವಿಸ್ಮರಣೀಯ. ನಿನ್ನನ್ನು ನಾನು ಎಂದಿಗೂ ಪ್ರೀತಿಸುವೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಡೇವಿಡ್ ಮಿಲ್ಲರ್ ಸದ್ಯ ದಕ್ಷಿಣ ಆಫ್ರಿಕಾ ತಂಡದ ಜತೆ ಸೀಮಿತ ಓವರ್‌ಗಳ ಸರಣಿಯನ್ನಾಡಲು ಭಾರತದಲ್ಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!