ಆಫ್ರಿಕಾದ ನೈಟ್‌ಕ್ಲಬ್‌ 17 ಮಂದಿ ಶವಪತ್ತೆ: ಕಾರಣ ಮಾತ್ರ ನಿಗೂಢ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಆಫ್ರಿಕಾದ ದಕ್ಷಿಣ ನಗರ ಪೂರ್ವ ಲಂಡನ್‌ನಲ್ಲಿರುವ ನೈಟ್‌ಕ್ಲಬ್‌ ವೊಂದರಲ್ಲಿ 17 ಮಂದಿ ಶವವಾಗಿ ಪತ್ತೆಯಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಅಲ್ಲಿನ ಪೊಲೀಸ್ ಅಧಿಕಾರಿ ಬ್ರಿಗೇಡಿಯರ್ ಥೆಂಬಿಂಕೋಸಿ ಕಿನಾನಾ , ಪೂರ್ವ ಲಂಡನ್‌ನಲ್ಲಿರುವ ಸೀನರಿ ಪಾರ್ಕ್‌ನಲ್ಲಿರುವ ಹೋಟೆಲ್ ಒಂದರಲ್ಲಿ ಭಾನುವಾರ ಬೆಳಗಿನ ಜಾವಾ ಹದಿನೇಳು ಮಂದಿ ಸಾವನ್ನಪ್ಪಿದ ಬಗ್ಗೆ ವರದಿ ಸಿಕ್ಕಿದೆ. ಯಾವ ಕಾರಣದಿಂದಾಗಿ ಸಾವು ಸಂಭವಿಸಿದೆ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕೆಲವು ಮೂಲಗಳ ಪ್ರಕಾರ ನೈಟ್ ಕ್ಲಬ್ ಒಳಗೆ ವಿಷಾ ಅನಿಲ ಸೋರಿಕೆಯಾಗಿದ್ದು ಇದರಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವನ್ನಪ್ಪಿದವರೆಲ್ಲರೂ ಹದಿನೆಂಟರಿಂದ ಇಪ್ಪತ್ತು ವರ್ಷದವರು ಎಂದು ಹೇಳಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!