ಅಸ್ಸಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಭಯಪಡುವ ಅಗತ್ಯ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಸ್ಸಾಂನಲ್ಲಿ ಆಫ್ರಿಕನ್ ಹಂದಿ ಜ್ವರದ ಕಾಣಿಸಿಕೊಂಡಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇದು ಹಂದಿಗಳಿಗೆ ಮಾತ್ರ ಬರುವ ಸಾಂಕ್ರಾಮಿಕ ರೋಗ. ಅಸ್ಸಾಂನ ದಿಬ್ರುಗಢ ಜಿಲ್ಲೆಯ ಭೋಗಾಲಿ ಪಥರ್ ಗ್ರಾಮದ ಹಂದಿಗಳಿಗೆ ಈ ವೈರಸ್ ಸೋಂಕು ತಗುಲಿದೆ. ತಕ್ಷಣ ಸ್ಪಂದಿಸಿದ ಪ್ರಾಣಿ ಸಂರಕ್ಷಣಾ ಅಧಿಕಾರಿಗಳು ರೋಗ ಇತರ ಪ್ರದೇಶಗಳಿಗೆ ಹರಡದಂತೆ ಕ್ರಮಕೈಗೊಂಡಿದ್ದಾರೆ.

ಸೋಂಕಿತ ಹಂದಿಗಳು ಕಂಡುಬಂದ ಪ್ರದೇಶದ ಸುತ್ತ ಒಂದು ಕಿಲೋಮೀಟರ್ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅದೇ ಸ್ಥಳದಲ್ಲಿ ಸೋಂಕು ತಗುಲಿದ ಹಂದಿಗಳನ್ನು ಕೊಂದು ನೆಲದಲ್ಲಿ ಹೂಳಿದ್ದಾರೆ. ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಸೋಂಕಿತ ಹಂದಿಗಳಿಂದ ಇತರ ಹಂದಿಗಳಿಗೆ ರೋಗ ಹರಡುವುದನ್ನು ತಡೆಯಲು ಇಂತಹ ಕ್ರಮ  ಕೈಗೊಂಡಿದ್ದಾರೆ. ಈ ರೋಗದಿಂದ ಮನುಷ್ಯರಿಗೆ ಯಾವುದೇ ರೀತಿಯ ಭಯವಿಲ್ಲ ಆದರೆ, ಹಂದಿಯಿಂದ ಹಂದಿಗೆ ತ್ವರಿತವಾಗಿ ಹರಡಬಹುದು. ಸ್ವಲ್ಪ ಸಮಯದವರೆಗೆ ಜನರು ಹಂದಿಮಾಂಸ ತನ್ನದಂತೆ ಸಲಹೆ ನೀಡಿದರು.

ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಉತ್ತರಾಖಂಡ, ಬಿಹಾರ ಮತ್ತು ತ್ರಿಪುರಾದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ವರದಿಯಾಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!