Thursday, December 1, 2022

Latest Posts

ಶ್ರದ್ಧಾ ಬದುಕಿದ್ದಾಳೆ ಎಂದು ಜಗತ್ತಿಗೆ ತೋರಿಸಲು ಆಕೆಯ ಇನ್ಸ್ಟಾಗ್ರಾಂ ಖಾತೆ ಬಳಸುತ್ತಿದ್ದ ಅಫ್ತಾಬ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರದ್ಧಾ ವಾಲ್ಕರ್ ಮರ್ಡರ್ ಕೇಸ್‌ನಿಂದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶ್ರದ್ಧಾಳನ್ನು ಭೀಕರವಾಗಿ ಕೊಂದು ಫ್ರಿಡ್ಜ್‌ನಲ್ಲಿಟ್ಟುಕೊಂಡಿದ್ದ ಅಫ್ತಾಬ್ ಆಕೆ ಬದುಕಿದ್ದಾಳೆ ಎಂದು ಜನಕ್ಕೆ ತೋರಿಸಲು ಆಕೆಯ ಇನ್ಸ್ಟಾಗ್ರಾಂ ಖಾತೆಯನ್ನು ಆಕ್ಟೀವ್ ಆಗಿಯೇ ಇಟ್ಟಿದ್ದ ಎನ್ನುವ ಮಾಹಿತಿ ಹೊರಬಂದಿದೆ.

ಜೂನ್‌ವರೆಗೆ ಶ್ರದ್ಧಾ ಇನ್ಸ್ಟಾಗ್ರಾಂ ಖಾತೆ ಆಕ್ಟೀವ್ ಆಗಿಯೇ ಇದೆ. ಪೊಲೀಸ್ ತಂಡಗಳು ಹೆಚ್ಚಿನ ಮಾಹಿತಿ ಪಡೆಯುವ ವೇಳೆ ಅಫ್ತಾಬ್ ಫೋನ್‌ನಲ್ಲಿ ಶ್ರದ್ಧಾ ಇನ್ಸ್ಟಾಗ್ರಾಂ ಆಕ್ಟೀವ್ ಆಗಿರುವುದನ್ನು ಗಮನಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ಮೆಹ್ರೌಲಿ ಪ್ರದೇಶದಲ್ಲಿ ಅಫ್ತಾಬ್ ತನ್ನ ಲಿವ್ ಇನ್ ಪಾರ್ಟ್‌ನರ್ ಶ್ರದ್ಧಾಳನ್ನು ಭೀಕರವಾಗಿ ಕೊಲೆ ಮಾಡಿದ್ದ. ಕೊಲೆಯಾದ ಐದು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!