Wednesday, November 30, 2022

Latest Posts

ವೆರೈಟಿಯಾಗಿ ಮಜ್ಜಿಗೆ ಹುಳಿ ಮಾಡಿ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು:

ಮೊಸರು – 2 ಕಪ್
ಕೊಬ್ಬರಿ – 1
ಸಾಸಿವೆ – 1 ಚಮಚ
ಜೀರಿಗೆ – 1 ಚಮಚ
ಕಡಲೆಬೇಳೆ – 1 ಚಮಚ
ಉದ್ದಿನಬೇಳೆ – 1 ಚಮಚ
ಕರಿಮೆಣಸು – 3
ಮೆಣಸಿನಕಾಯಿ – 2
ಕರಿಬೇವಿನ ಸೊಪ್ಪು – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಶುಂಠಿ – ಕತ್ತರಿಸಿದ
ಹಸಿರು ಮೆಣಸಿನಕಾಯಿ – 2
ಎಣ್ಣೆ – ಸಾಕಷ್ಟು
ಉಪ್ಪು – ರುಚಿಗೆ
ಅರಿಶಿನ – ಚಿಟಿಕೆ

ತಯಾರಿಸುವ ವಿಧಾನ:

ಉಪ್ಪು ಹಾಕಿದ ಮೊಸರನ್ನು ಉಂಡೆಯಿಲ್ಲದಂತೆ ಕದಡಿ ಮತ್ತು ಪಕ್ಕಕ್ಕೆ ಇರಿಸಿ. ಇದೀಗ ಕೊಬ್ಬರಿ ಮತ್ತು ಶುಂಠಿಯನ್ನು ಮಿಕ್ಸಿಂಗ್ ಜಾರ್‌ಗೆ ಹಾಕಿ ಜೊತೆಗೆ ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮೊಸರಿಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ತೀರಾ ತೆಳುವಾಗಿರದೆ, ಸ್ವಲ್ಪ ದಪ್ಪವಾಗಿರುವಂತೆ ನೋಡಿಕೊಂಡರೆ ರುಚಿ ಚೆನ್ನಾಗಿರುತ್ತದೆ.

ನಂತರ ಸ್ಟವ್ ಆನ್ ಮಾಡಿ ಚಿಕ್ಕ ಬಾಣಲೆ ಇಟ್ಟು ಅದಕ್ಕೆ ಅಗತ್ಯವಿರುವಷ್ಟು ಎಣ್ಣೆ ಹಾಕಿ ಹುರಿಯಿರಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಉದ್ದಿನಬೇಲೆ ಸೇರಿಸಿ, ತಲಾ ಒಂದು ಚಮಚ ಮತ್ತು ಎರಡು ಭಾಗಗಳಾಗಿ ಕತ್ತರಿಸಿದ ಅರಿಶಿನ ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ ತಕ್ಷಣ ಒಲೆ ಆಫ್ ಮಾಡಿ. ಮೊಸರಿನ ಮಿಶ್ರಣಕ್ಕೆ ಈ ಒಗ್ಗರಣೆ ಸೇರಿಸಿ ಚೆನ್ನಾಗಿ ಕಲಸಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಮಜ್ಜಿಗೆ ಹುಳಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!