13ವರ್ಷದ ಬಳಿಕ ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಗೌರೀಶಂಕರ್

ಹೊಸದಿಗಂತ ವರದಿ ತುಮಕೂರು: 

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಗೂಳೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಗೊಳಪಡುವ ಹರಳೂರು ಕೆರೆ 13 ವರ್ಷದ ನಂತರ ಕೋಡಿ ಬಿದ್ದಿದ್ದು ಶಾಸಕರಾದ ಡಿ ಸಿ ಗೌರೀಶಂಕರ್ ಭಾಗಿನ ಅರ್ಪಿಸಿದರು. 13 ವರ್ಷದ ನಂತರ ಕೋಡಿ ಬಿದ್ದ ಕೆರೆ ಕಂಡ ಈ ಭಾಗದ ರೈತರು ಮೊಗದಲ್ಲಿ ಆನಂದ ತುಂಬಿತ್ತು.

ಗೂಳೂರು ಹೋಬಳಿ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಜಿ.ಪಾಲನೇತ್ರಯ್ಯ ಅವರ ನೇತೃತ್ವದಲ್ಲಿ ಶಾಸಕರಾದ ಡಿ ಸಿ ಗೌರೀಶಂಕರ್ ಅವರ ಅಧ್ಯಕ್ಷತೆ ಹಾಗೂ ಶ್ರೀ ಚನ್ನಬಸವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀಗಳಿಗೆ ಪಾದಪೂಜೆ ಮಾಡಿ ಹರಳೂರು ಕೆರೆಗೆ ಗಂಗಾಪೂಜೆಯನ್ನು ನೆರವೇರಿಸಲಾಯಿತು, ಗಂಗಾ ಪೂಜೆಯಲ್ಲಿ ನೆರೆದಿದ್ದ 2000ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಹಿಂದೂ ಸಂಪ್ರದಾಯದಂತೆ ಶಾಸಕರು ಹಾಗೂ ಪಾಲನೇತ್ರಯ್ಯ ಅವರುಗಳು ಬಾಗಿನ ನೀಡಿದರು.

ಹರಳೂರು ಗ್ರಾಮದ ಕೆರೆಯ ಗಂಗಾಪೂಜೆ ಕಾರ್ಯಕ್ರಮದ ಬಳಿಕ ಶಾಸಕರಾದ ಡಿ ಸಿ ಗೌರೀಶಂಕರ್ ಹರಳೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೇರಳಾಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ,ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ, ಕ್ರೀಡಾ ಸಾಮಗ್ರಿಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!