32 ವರ್ಷದ ನಂತರ ಚಿತ್ರದುರ್ಗದಲ್ಲಿ ವಿಶೇಷ ಜಾತ್ರೆ, ಊರಿಗೆ ಊರೇ ಚಪ್ಪಲಿ ಧರಿಸೋದಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

32 ವರ್ಷಗಳ ನಂತರ ಕೋಟೆನಾಡು ಚಿತ್ರದುರ್ಗದಲ್ಲಿ ವಿಶೇಷ ಜಾತ್ರೆ ಸಂಭ್ರಮ ಮನೆಮಾಡಿದ್ದು, ಈ ಜಾತ್ರೆ ಸಂದರ್ಭದಲ್ಲಿ ಇಡೀ ಊರಿಗೆ ಪಾದರಕ್ಷೆ ನಿಷೇಧಿಸಲಾಗಿದೆ.

ಚಿತ್ರದುರ್ಗದ ಬೊಮ್ಮೇನಹಳ್ಳಿಯಲ್ಲಿ ಗ್ರಾಮದೇವತೆ ಉತ್ಸವ ನಡೆಯುತ್ತಿದೆ. ಇಡೀ ಗ್ರಾಮದ ಸೀಮೆಗೆ ಗಂಗಾಜಲ ಚುಮುಕಿಸಿ ಸರಗಾ ಹಾಕಲಾಗುತ್ತದೆ.

ಸಾಮಾನ್ಯವಾಗಿ ದೇವಾಲಯಗಳಿಗೆ ಹೋಗುವಾಗ ಚಪ್ಪಲಿ ಇಲ್ಲದೆ ಹೋಗಲಾಗುತ್ತದೆ. ಆದರೆ ಈ ಗ್ರಾಮಕ್ಕೆ ಎಂಟ್ರಿ ಕೊಡುವಾಗಲೇ ಚಪ್ಪಲಿ ಇಲ್ಲದೆ ಬರಬೇಕಾಗುತ್ತದೆ. ಅಲ್ಲಿಂದ ಎಲ್ಲಿಗೆ ತೆರಳಬೇಕಾದರೂ ಚಪ್ಪಲಿಯನ್ನು ಕೈಯಲ್ಲಿಯೇ ಹಿಡಿದು ತೆರಳಬೇಕಾಗುತ್ತದೆ.

ಮೂರು ದಶಕಗಳ ನಂತರ ಜಾತ್ರೆ ನಡೆಯುತ್ತಿದ್ದು, ಊರಿಗೇ ಊರೇ ಸಂಭ್ರಮಿಸುತ್ತಿದೆ. ಗ್ರಾಮದ ಮಾರಿಕಾಂಬಾ, ಬಸಾಯ ಪಟ್ಟಣಂ ದೇವಿಯರ ಉತ್ಸವ ನಡೆಯಲಿದೆ. ಮೊದಲ ದಿನ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.

ಇಡೀ ಗ್ರಾಮವನ್ನೇ ಶುದ್ಧಗೊಳಿಸಿ, ಗಂಗಾಜಲ ಹಾಕುವುದರಿಂದ ಇದು ಪರಿಶುದ್ಧ ಎಂದು ಭಾವಿಸಲಾಗುತ್ತದೆ. ಹಾಗಾಗಿ ಇಲ್ಲಿ ಚಪ್ಪಲಿ ಹಾಕುವುದಿಲ್ಲ. ಬೈಕ್, ಕಾರ್ ಓಡಿಸುವವರೂ ಕೂಡ ಚಪ್ಪಲಿ ಇಲ್ಲದೆ ಓಡಾಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!